Friday 9th, May 2025
canara news

ನ್ಯಾಯಧೀಶ ರಾಜಶೇಖರವರಿಗೆ ನ್ಯಾಯಲಯ ಸಿಬ್ಬಂದಿಯಿಂದ ಬೀಳ್ಕೊಡುಗೆ

Published On : 29 May 2017   |  Reported By : Bernard J Costa


ಕುಂದಾಪುರ,ಮೇ.29: ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶ್ರೀ.ರಾಜಶೇಖರ ವಿ.ಪಾಟಿಲ್, ಇವರಿಗೆ ಬೆಂಗಳೂರಿನ ಸಿಟಿ. ಸಿವಿಲ್ ನ್ಯಾಯಲಯಕ್ಕೆ ವರ್ಗಾವಣೆಗೊಂಡ ಪ್ರಯುಕ್ತ ಶಿರಸ್ತೇದಾರರಾದ ಮೋಹನ್ ಕಲ್ಯಾಣಪುರ ಮತ್ತು ಕಛೇರಿಯ ಹಿರಿಯ ಸಿಬ್ಬಂದಿ ಬೈಲೀಪ್ ಶಾಂತಪ್ಪನವರ ಸಹಯೋಗದಿಂದ ಬೀಳ್ಕೊಡುಗೆ ಸಮಾರಂಭವನ್ನು ಆಚರಿಸಲಾಯಿತು.

ಶಿರಸ್ತೇದಾರರು ಗೌರವಾನ್ವಿತ ನ್ಯಾಯಧೀಶರ ಗುಣಗಾನ ಮಾಡಿ ‘ಅವರ ಮೂರು ವರ್ಷಗಳ್ಸ್ ಅವಧಿಯ ಸೇವೆಯಲ್ಲಿ ಸಿಬ್ಬಂದಿಯ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂದಿದ್ದು, ಸಿಬ್ಬಂದಿ ವರ್ಗದ ಕರ್ತವ್ಯದಲ್ಲಿ ತಪ್ಪು ಕಂಡು ಬಂದಲ್ಲಿ ಅದನ್ನು ತಿದ್ದಿ ಸರಿಪಡಿಸುವಂತೆ ತಿಳಿ ಹೇಳುತಿದ್ದರು. ಹಳೆಯ ಪ್ರಕರಣಗಳನ್ನು ಹಾಗೂ ಹೆಚ್ಚಿನ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ ಕೇಸುಗಳನ್ನು ಕಡಿಮೆಯಾಗುವಂತೆ ಮಾಡುತಿದ್ದರು. ಅಲ್ಲದೆ ಅವರು ಬಹಳ ಸರಳ ಸಜ್ಜನಿಕೆಯವರಾಗಿದ್ದು ಕಛೇರಿಯ ಸಿಂಬ್ಬಂದಿಗಳ ಪರ ತುಂಬಾನೇ ಕಾಳಜಿ ಹೊಂದಿದ್ದರು’ ಎಂದು ತಮ್ಮ ಅನ್ನಿಸೆಕೆಯನ್ನು ವ್ಯಕ್ತ ಪಡಿಸಿದರು.

ಗೌರವಾನ್ವಿತ ನ್ಯಾಯಧೀಶ ರಾಜಶೇಖರ ವಿ.ಪಾಟಿಲ್ ಮಾತಾಡಿ ‘ಸಿಬ್ಬಂದಿ ಹಾಗೂ ನ್ಯಾಧೀಶರ ಸಂಬಂಧ ಚೆನ್ನಾಗಿದ್ದರೆ ಮಾತ್ರ ನ್ಯಾಯಧಿಶರಿಗೆ ತನ್ನ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯ. ಇಲ್ಲಿನ ಎಲ್ಲಾ ಸಿಬ್ಬಂದಿಗಳು ಒಳ್ಳೆಯ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ ತುಂಬಾನೇ ಸಹಕಾರ ನೀಡುತಿದ್ದರು. ಸಿಬ್ಬಂದಿ ವರ್ಗ ತಮ್ಮ ಕರ್ತವ್ಯದ ಬಗ್ಗೆ ಬದ್ದತೆಯನ್ನು ಹೊಂದಿಕೊಳ್ಳಬೇಕು. ನಿಮಗೆ ಮುಂದಿನ ದಿನಗಳಲ್ಲಿ ನನ್ನಿಂದ ಯಾವುದೇ ರೀತಿಯ ಸಹಾಯ ಬೇಕಿದಲ್ಲಿ ನನ್ನಿಂದಾದಸ್ಟು ಸಹಾಯ ಮಾಡುತ್ತೇನೆ ಎಂದು’ ಹೇಳುತ್ತಾ ಕಛೇರಿಯ ಸಿಬ್ಬಂದಿಗಳಿಗೆ ಕ್ರತಜತ್ಞೆ ಸಲ್ಲಿಸಿದರು, ‘ಹೂ ಹಣ್ಣು ನೀಡಿ ಸನ್ಮಾನ ಮಾಡಿದ ಸಿಬ್ಬಂದಿಗಳಿಗೆ ಇದನ್ನು ಕೊಡುವ ಬದಲು ಪುಸ್ತಕಗಳ ಕಾಣಿಕೆಯನ್ನು ನೀಡಿ ಅದು ಸದಾಕಾಲ ನೆನಪಿನಲ್ಲಿರುತ್ತದೆ’ ಎಂದು ಹೇಳಿ ತಾವು ಪುಸ್ತಕ ಪ್ರಿಯರೆಂದು ಮನಗಾಣಿಸಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ಎಲ್ಲ ಸಿಬ್ಬಂದಿ ವರ್ಗವು ಅವರ ಮುಂದಿನ ಸೇವಾಧಿಯಲ್ಲಿ ದೇವರು ಒಳಿತು ಮಾಡಲೆಂದು ನ್ಯಾಯಧೀಶರಿಗೆ ಶುಭ ಹಾರೈಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here