Friday 9th, May 2025
canara news

ಮುಂಬಯಿಯ ಗೋಕುಲ ಕಲಾವೃಂದ ಮಹಿಳೆಯರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ

Published On : 29 May 2017   |  Reported By : Rons Bantwal


ಮುಂಬಯಿ, ಮೇ.29: ಗೋಕುಲ, ಸಾಯನ್- ಗೋಕುಲ ಕಲಾವೃಂದ, ಮಹಿಳಾ ವಿಭಾಗದವರಿಂದ ಗುರು ಶೇಣಿ ಶ್ಯಾಮ್ ಭಟ್ ಅವರ ಮಾರ್ಗದರ್ಶನ ಹಾಗೂ ಗೀತಾ ಎಲ್ ಭಟ್ ಅವರ ನಿರ್ದೇಶನದಲ್ಲಿ ಶುಕ್ರವಾರ (ಮೇ.19) ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಪ್ರಾಯೋಜಕತ್ವದಲ್ಲಿ ದೇವಸ್ಥಾನದ ವಠಾರದಲ್ಲಿ `ಅತಿಕಾಯ ಮೋಕ್ಷ' ಹಾಗೂ ಶನಿವಾರ (ಮೇ .20) ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ `ಭೀಷ್ಮ ವಿಜಯ' ಎಂಬ ಎರಡು ಕಥಾ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಗೊಂಡಿತು.

ಗೀತಾ ಎಲ್.ಭಟ್, ಶೈಲಿನಿ ರಾವ್, ಪ್ರೇಮಾ ರಾವ್, ಚಂದ್ರಾವತಿ ರಾವ್ ಹಾಗೂ ಶಾಂತಿಲಕ್ಷ್ಮಿ ಉಡುಪ ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಪೃಥ್ವಿರಾಜ್ ಕವತ್ತಾರು ಮತ್ತು ವಾಸುದೇವ ಭಟ್, ಮದ್ದಳೆಯಲ್ಲಿ ಮೋಹನ್ ಶೆಟ್ಟಿಗಾರ್ ಮತ್ತು ಗಣೇಶ್ ಭಟ್, ಚೆಂಡೆಯಲ್ಲಿ ಚಂದ್ರಶೇಖರ್ ಭಟ್,ಕೊಂಕಣಾಜೆ ಮತ್ತು ಅಪೂರ್ವ ಸುರತ್ಕಲ್ ಹಾಗೂ ಚಕ್ರತಾಳದಲ್ಲಿ ಚೇತನ್ ಮತ್ತು ಅಮೋಘ ಸಹಕರಿಸಿದ್ದರು.

ರವಿವಾರ (ಮೇ.21) ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕಲಾವೃಂದದ ಹಿರಿಯ ಹಾಗೂ ಕಿರಿಯ ಕಲಾವಿದರ ಕೂಡುವಿಕೆಯಿಂದ `ಶಶಿಪ್ರಭಾ ಪರಿಣಯ' ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ಮುಮ್ಮೇಳದಲ್ಲಿ ಶೈಲಿನಿ ರಾವ್, ಗೀತಾ ಎಲ್.ಭಟ್, ನರಸಿಂಹ, ರಕ್ಷಾ ರಾವ್, ಸಹನಾ ಭಾರದ್ವಾಜ್, ತನ್ವಿ ರಾವ್, ಸುಪ್ರಿಯಾ ಉಡುಪ, ರಚಿತಾ ರಾವ್, ಡಾ| ಸುಮನ್ ರಾವ್, ಡಾ| ಸಹನಾ ಪೆÇೀತಿ, ಜಾಹ್ನವಿ ಹಾಗೂ ಭಾರ್ಗವಿ ಪೆÇೀತಿ, ಶ್ರೀಕೃಷ್ಣ ಉಡುಪ, ಶಾಂತಿಲಕ್ಷ್ಮಿ ಉಡುಪ, ಅಂಜನಾ ರಾವ್ ಭಾಗವಹಿಸಿದ್ದರು.

ಹಿಮ್ಮೇಳದಲ್ಲಿ ದ್ವಂದ್ವ ಭಾಗವತಿಕೆಯಲ್ಲಿ ಜಯಪ್ರಕಾಶ್ ನೀಡುವಣ್ಣಾಯ ಹಾಗೂ ವಾಸುದೇವ ಭಟ್, ಮದ್ದಳೆಯಲ್ಲಿ ಅಕ್ಷಯ ಕುಮಾರ್, ಚೆಂಡೆಯಲ್ಲಿ ಶ್ರೀಶ ರಾವ್, ಹಾಗೂ ಚಕ್ರತಾಳದಲ್ಲಿ ರಜನೀಶ್ ಸಹಕರಿಸಿದ್ದರು.

ಶ್ರೀ ಮಠದಲ್ಲಿ ಜರಗಿದ ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನದಲ್ಲಿ ಶ್ರೀ ವಿಶ್ವೇಶತೀರ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಲಾವಿದರಿಗೆ ಪ್ರಸಾದ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here