ಮಂಗಳೂರು: ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಮಾಡುವ ಆಸ್ತಕಿಯನ್ನು ವ್ಯಕ್ತಪಡಿಸಿರುವ ಪ್ರತೀಕ್, ರಸಾಯನಶಾಸ್ತ್ರ, ಗಣಿತ ಹಾಗೂ ಸಂಖ್ಯಾಗಣಿತದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಜೆಇಇ ಮೇನ್ಸ್ ಪರೀಕ್ಷೆಯಲ್ಲೂ 1300ನೆ ರ್ಯಾಂಕ್ ಗಳಿಸಿ, ಸಾಧನೆ ಮಾಡಿದ್ದಾರೆ.