Friday 9th, May 2025
canara news

ಜೂ.11: ಷಣ್ಮುಖಾನಂದ ಸಭಾಗೃಹದಲ್ಲಿ ಚಲನಚಿತ್ರ ತಾರೆ-ನೃತ್ಯಪಟು

Published On : 03 Jun 2017   |  Reported By : Rons Bantwal


ಹೇಮಮಾಲಿನಿ ಬಳಗದಿಂದ ನೃತ್ಯರೂಪಕ-ರಾಧಾ ರಾಸ್ ಬಿಹಾರಿ

ಮುಂಬಯಿ, ಜೂ.03: ಬಿಎಸ್‍ಕೆಬಿ ಅಸೋಸಿಯೇಶನ್, ಗೋಕುಲ ಸಾಯನ್ ಇದರ ಗೋಕುಲ ಯೋಜನೆ `ವಿಷನ್-2020' ಸಹಾಯಾರ್ಥವಾಗಿ ಸಯಾನ್ ಕಿಂಗ್ ಸರ್ಕಲ್ ಅಲ್ಲಿನ ಷಣ್ಮುಖಾನಂದ ಸಭಾಗೃಹದಲ್ಲಿ ಇದೇ ಜೂನ್.11ರ ರವಿವಾರ ಸಂಜೆ 6.00 ಗಂಟೆಯಿಂದ ಪ್ರಸಿದ್ಧ ಚಲನ ಚಿತ್ರತಾರೆ, ನೃತ್ಯಪಟು ಹೇಮಮಾಲಿನಿ ಮತ್ತು ಬಳಗದವರಿಂದ `ರಾಧಾ ರಾಸ್ ಬಿಹಾರಿ' ಸಂಗೀತ ನೃತ್ಯ ರೂಪಕ ಆಯೋಜಿಸಲಾಗಿದೆ. ನಾಟ್ಯವಿಹಾರ ಕಲಾಕೇಂದ್ರ ಮುಂಬಯಿ ಇವರ ಪ್ರಸ್ತುತಿಯಲ್ಲಿ ನಾಡಿನ ಹೆಸರಾಂತ ನೃತ್ಯ ಸಂಯೋಜಕ ಭೂಷಣ್ ಲಕ0ದ್ರಿ ಅವರ ನೃತ್ಯ ಸಂಯೋಜನೆ, ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಹಿಂದಿ ಚಲನಚಿತ್ರ ರಂಗದ ದಿಗ್ಗಜರಾದ ರವೀಂದ್ರ ಜೈನ್, ಹಾಗೂ ಹಿನ್ನೆಲೆ ಗಾಯಕರಾಗಿ ಖ್ಯಾತ ಕವಿತಾ ಕೃಷ್ಣಮೂರ್ತಿ, ಸುರೇಶ್ ವಾಡ್ಕರ್, ರೂಪಕುಮಾರ್ ರಾಥೋಡ್ ಮುಂತಾದವರು ತಮ್ಮ ಕಂಠದಾನ ಮಾಡಿದ್ದಾರೆ. ಹೆಸರಾಂತ ಹಾಸ್ಯಪಟು ಜಾನಿ ಲಿವರ್ ತಮ್ಮ ಹಾಸ್ಯ ಹೊನಲಿನಿಂದ ಶ್ರೋತೃಗಳೊಂದಿಗೆ ನಗೆಗಡಲಿನಲ್ಲಿ ತೇಲಿಸಲಿದ್ದಾರೆ.

ಕಟ್ಟಡ ನಿಧಿಯ ಸಹಾಯಾರ್ಥವಾಗಿ ಜರಗಲಿರುವ ಈ ಕಾರ್ಯಕ್ರಮಕ್ಕೆ ದೇಣಿಗೆ ಪ್ರವೇಶ ಪತ್ರವನ್ನು ಸಂಸ್ಥೆಯ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here