Friday 9th, May 2025
canara news

ಓಪನ್ ಗಾರ್ಡನ್‍ನಲ್ಲಿ ಮದುವೆ ರಿಸೆಪ್ಶನ್ ಮಳೆರಾಯನಿಗೆ ಬೆಸತ್ತ ಆಮಂತ್ರಿತರು ಫುಲ್ ಟೆನ್ಶನ್

Published On : 04 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.04 : ಇಂದಿಲ್ಲಿ ರಾತ್ರಿ ಅಂಧೇರಿ ಪೂರ್ವದಲ್ಲಿ ಕ್ರೈಸ್ತ ಸಮುದಾಯದ ಮದುವೆ ರಿಶಪ್ಶನ್ ಆಯೋಜಿಸಿದ್ದು, ನೂರಾರು ಬಂಧುಮಿತ್ರರು ಆಗಮಿಸಿ ಸಡಗರದಲ್ಲಿ ಪಾಲ್ಗೊಂಡಿದ್ದ್ದರು. ಸಂಜೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ಲಕ್ಷಣ ತೋರುತ್ತಿದ್ದರೂ, ವಧುವರರ ಕಡೆಯವರು ಸಂಭ್ರಮದ ಡ್ಯಾನ್ಸ್‍ಗೆ ಮಹತ್ವ ನೀಡುವಂತಿತ್ತು. ನೃತ್ಯಾವಳಿಯಲ್ಲೇ ಮಗ್ನರಾದ ಅನೇಕರು ಡ್ಯಾನ್ಸ್‍ನಲ್ಲೇ ತೇಲಾಡುವಂತಿದ್ದರು. ಕಾರ್ಯನಿರ್ವಾಹಕ (ಎಂಸಿ) ಕೂಡಾ ಸಮಯ ಪ್ರಜ್ಞೆ ಮರೆತು ಎಲ್ಲರನ್ನೂ ಒಗ್ಗೂಡಿ ಡ್ಯಾನ್ಸ್ ಮಾಡಿಸುವಲ್ಲೇ ಮಗ್ನರಾಗಿದ್ದನು.

ಕನಿಷ್ಠ ಒಂದು ತಾಸು ವಿವಿಧ ರೀತಿಯ ಭಂಗಿಗಳ ಡ್ಯಾನ್ಸ್‍ಗಳನ್ನು ಮಾಡಿಸುತ್ತಾ ಕುಣಿದಾಡುವವರಿಗೆ ಮಜ್ಹಾ ಅಣಿಸುತಿತ್ತು. ಆದರೂ ಅನೇಕರು ಪದೇಪದೇ ಬಾಣದತ್ತ ನೋಡುತ್ತಾ ಮಳೆ ಬೀಳುವುದನ್ನೇ ಗಮನಿಸುತ್ತಿದ್ದರು. ಆದರೂ ಡ್ಯಾನ್ಸ್ ಪ್ರಿಯರು ಸಕತ್ತಾಗಿ ಕುಣಿದು ಕುಪ್ಪಳಿಸುತ್ತಿದ್ದರು. ಕೊನೆಗೂ ವರುಣನ ಆಗಮನ ಆಗಿಯೇ ಬಿಟ್ಟುತು. ಅತ್ತ ಧ್ವನಿವರ್ಧಕದವರು ಸೌಂಡ್‍ಬಾಕ್ಸ್‍ಗಳಿಗೆ ಪ್ಲಾಸ್ಟಿಕ್ ಹೊದೆದರು. ಇತ್ತ ಲೈಟಿಂಗ್‍ನವರು ತಮ್ಮ ಸುರಕ್ಷತೆಯನ್ನು ಕಂಡರು. ಆದರೆ.... ಆಮಂತ್ರಿತ ಮನೆಮಂದಿ ಮನೆಗೆ ಬೀಗ ಹಾಕಿ ಮದುವೆಯ ಬೀಗರೂಟಕ್ಕೆ ಕಾಯುತ್ತಿದ್ದಂತೆಯೇ ಎಲ್ಲವೂ ಜಲಾಮಯವಾಯಿತು. ನೆರೆದಿದ್ದ ಆಮಂತ್ರಿತ ಕೆಲವರು ಅಲ್ಲಿಲ್ಲಿ ಸಿಕ್ಕಸಿಕ್ಕ ಗಿಡಮರದಡಿಗಳ ಬುಡಗಳಲ್ಲಿ ಅಡಗಿಕೊಂಡರೆ ಮತ್ತನೇಕರು ಆಸನ ವ್ಯವಸ್ಥೆಗೈದ ಕುರ್ಚಿಗಳನ್ನೇ ಹೊತ್ತು ತಲೆಮಾಚಿ ಕೊಂಡರು.

ಕೊನೆಗೆ ಮಳೆರಾಯನು ನಿಲ್ಲುವ ಸೂಚನೆ ನೀಡದಿರುವುದನ್ನು ಗಮನಿಸಿದ ಮದುವೆ ಪರಿವಾರವು ಸ್ಥಳಿಯ ಸಭಾಗೃಹಕ್ಕೆ ಜಾಗ ಬದಲಾಯಿಸಿದರೂ ಬಹುತೇಕರು ಮನೆಗೆ ತೆರಳುವಂತಾಯಿತು. ಬೇಕಾ ಸ್ವಾಮಿ ಇಂತಹ ಸಮಯ ತೆರೆದ ಉದ್ಯಾನದಲ್ಲಿ ಮದುವೆ ಸತ್ಕಾರಕೂಟ... ಮಳೆಗೆ ಒದ್ದೆಯಾಗಿ ಆಮಂತ್ರಿತರ ಓಟ (ಓಪನ್ ಗಾರ್ಡನ್‍ನಲ್ಲಿ ಮದುವೆ ರಿಸೆಪ್ಶನ್.... ಮಳೆರಾಯನಿಗೆ ಬೆಸತ್ತ ಆಮಂತ್ರಿತರು ಫುಲ್ ಟೆನ್ಶನ್...!) ಮಳೆಯ ಬರೋದು ತಿಳಿದೂ ಸುಮ್ಮನಾದ ಕಾರಣ ಜವರಾಯನ ಆಗಮನದಿಂದ ಎಲ್ಲವೂ ನೀರಾಯಿತು. ಒಟ್ಟಾರೆ ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತಾ ಮನೆಗೆ ಸೇರಿದ ಜನರು ಒಂದೆಡೆಯಾದ್ರೆ ನೆರೆದನೇಕರು ಅಲ್ಲಿದ್ದೇ, ಮತ್ತನೇಕರು ಸಂಬಂಧಿಕರಿಗೋ... ಮನೆಯವರಿಗೂ ಫೆÇೀನಾಯಿಸಿ ಒಮ್ಮೆ ಮಳೆ ನಿಲ್ಲುವಂತೆ ಪ್ರಾಥಿರ್üಸುತ್ತಿರುವುದು ಕಂಡು ಬಂದರೂ.... ಒಮ್ಮೆ ಮಳೆ ಬಂದು ಸೆಕೆಮುಕ್ತರಾಗಲು ಬಯಸುವ ಹಾಗೂ ಮಳೆಗಾಗಿಯೇ ಲಕ್ಷಾಂತರ ಖರ್ಚು ಮಾಡಿ ಪೂಜೆ ಮೂಲಕ ವರುಣನಿಗೆ ಮೊರೆ ಹೋದ ಜನರಿಗೆ ಇವರೆಲ್ಲರ ವರ್ತನೆ ಮೂರ್ಖರಣಿನಿಸುತ್ತಿತ್ತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here