Friday 9th, May 2025
canara news

ಅಖಿಲ ಕರ್ನಾಟಕ ಜೈನ ಸಂಘದ ಸ್ಥಾಪಕ ಸದಸ್ಯ ಜಯ ಎ.ಜೈನ್ ನಿಧನ

Published On : 06 Jun 2017   |  Reported By : Canaranews Network


ಮುಂಬಯಿ, ಜೂ.05: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ (ರಿ.) ಇದರ ಸ್ಥಾಪಕ ಸದಸ್ಯರಲ್ಲೋರ್ವರೂ, ಹಾಲಿ ಕಾರ್ಯಕಾರಿ ಸಮಿತಿ ಸದಸ್ಯ ಜಯ ಎ.ಜೈನ್ (67.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಶನಿವಾರ ಅಂಧೇರಿ ಪಶ್ಚಿಮದ ಕೋಕಿಲಾಬೆನ್ ಧೀರುಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ವಿಧಿವಶರಾದರು.

ಮುಂಬಯಿ ಉಪನಗರ ಕಾಂದಿವಿಲಿ ಪಶ್ಚಿಮದ ದಾಹಣುಕರ್‍ವಾಡಿ ಅಲ್ಲಿನ ಶ್ರೀ ಇಶಾನ್ ಎಸ್‍ಆರ್‍ಎ ಹೌಸಿಂಗ್ ಸೊಸೈಟಿ ನಿವಾಸಿ ಆಗಿದ್ದ ಜಯ ಜೈನ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕುಪ್ಪೆಪದವು ಅಲ್ಲಿನ ದಿನನಿಧಿ ಮೂಲದವರಾಗಿದ್ದರು. ಕಳೆದ 35 ವರ್ಷಗಳಿಂದ ಮಹಾನಗರದ ಪ್ರತಿಷ್ಠಿತ ಪೆÇಲಿಕೆಮ್ ಸಂಸ್ಥೆಯಲ್ಲಿ ಸೇವಾ ನಿರತರಾಗಿದ್ದು ಓರ್ವ ದಕ್ಷ, ನಿಷ್ಠಾವಂತ ಮತ್ತು ತೆರೆಮರೆಯ ಸಮಾಜ ಸೇವಕರಾಗಿದ್ದ ಇವರು ಜೈನ ಸಂಘದ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿದ್ದರು. ಜನಾನುರೆಣಿಸಿದ್ದರು.

ಮೃತರು ಪತ್ನಿ, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆಯು ತವರೂರುನಲ್ಲಿ ನಡೆಸಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here