Friday 9th, May 2025
canara news

ಗೋರೆಗಾಂವ್ ಪೂರ್ವದಲ್ಲಿ `ಮಲಾೈಕಾ' ಕಾರ್ಪೊರೇಟ್ ಕಚೇರಿ ಶುಭಾರಂಭ

Published On : 06 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.06: ಗೃಹಪಯೋಗಿ ವಸ್ತುಗಳ ಮಾರಾಟ ಹಾಗೂ ವಿತರಣೆಗೆ ಮನೆಮಾತಾಗಿರುವ ಹೆಸರಾಂತ ಮಲಾೈಕಾ ಅಪ್ಲೈಯನ್ಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೇಂದ್ರ ಕಚೇರಿ (ಕಾರ್ಪೊರೇಟ್ ಆಫೀಸ್) ಇಂದಿಲ್ಲಿ ಸೋಮವಾರ ಅಪರಾಹ್ನ ಗೋರೆಗಾಂವ್ ಪೂರ್ವದ ಸೋನಾವಣೆ ರಸ್ತೆಯಲ್ಲಿನ ಕಾರ್ಪೊರೇಟ್ ಅವೆನ್ಯೂ ಕಟ್ಟಡದಲ್ಲಿ ಉದ್ಘಾಟಿಸಲ್ಪಟ್ಟಿತು. ಗೋರೆಗಾಂವ್ ಪೂರ್ವದ ಸೈಂಟ್ ಥೋಮಸ್ ಚರ್ಚ್ ಧರ್ಮಗುರು ರೆ| ಫಾ| ಎನ್ರೀಕ್ ಇಟರ್ ರಿಬ್ಬನ್ ಬಿಡಿಸಿ ನಂತರ ಆರೀರ್ವಚನಗೈದು ಶುಭೇಚ್ಛ ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿsಗಳಾಗಿ ಶ್ರೀಮತಿ ಸರೊಫಿನಾ ಲೋಪೆಸ್, ಈಶಿಟಾ ಪುಜಾರಿ, ಉದ್ಯಮಿಗಳಾದ ಮೋಸೆಸ್ ಕಾರ್ಡೋಜಾ, ಗೋಪಾಲ್ ಬಜಾಜ್, ನಾಗೇಂದ್ರ ತಿವಾರಿ, ಜೆರಾಲ್ಡ್ ರೇಗೋ, ಸಮಾಜ ಸೇವಕರುಗಳಾದ ಚಾರ್ಲ್ಸ್ ಪತ್ರಾವೋ, ಜೋನ್ ಜಿ.ಮೆಂಡೋನ್ಸಾ ಮತ್ತಿತರÀ ಗಣ್ಯರು ಉಪಸ್ಥಿತರಿ ದ್ದು ಶುಭಹಾರೈಸಿದರು.

ಮಲಾೈಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್ ಪಿ.ಬ್ಯಾಪ್ಠಿಸ್ಟ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಮಾರ್ಸೆಲಿನ್ ಜಿ.ಬ್ಯಾಪ್ಠಿಸ್ಟ್, ಯಶಿಕಾ ಜಿ.ಬ್ಯಾಪ್ಠಿಸ್ಟ್ ಅತಿಥಿüವರ್ಯರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕು| ಮಲಾೈಕಾ ಜಿ.ಬ್ಯಾಪ್ಠಿಸ್ಟ್ ಬೈಬಲ್ ವಾಚಿಸಿದರು. ಮಲಾೈಕಾ ಸಂಸ್ಥೆಯ ಹೆಚ್‍ಆರ್ ವಿಭಾಗದ ಮುಖ್ಯಸ್ಥ ನೋಯೆಲ್ ಮಸ್ಕರೇನ್ಹಾಸ್ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು

ಈ ಶುಭಾವಸರದಲ್ಲಿ ಮಲಾೈಕಾ ಸಂಸ್ಥೆಯ ಉನ್ನತಾಧಿಕಾರಿಗಳಾದ ಎಲ್ಸಿ ಜೆ.ರೋಡ್ರಿಗಸ್, ಮನೋಹರ್ ಆರ್.ಶೆಟ್ಟಿ, ತೇಜಾ ರವೀಂದ್ರ ಶೆಟ್ಟಿ, ಸಂತೋಷ್ ತಿಂಗಳಾಯ, ಸುಶಾಂತ್ ಎಸ್.ಸಬತ್, ಲೋಯಲ್ ಬ್ಯಾಪ್ಠಿಸ್ಟ್, ಚಂದ್ರಶೇಖರ್ ನಾಯಕ್, ನೌಕರ ವೃಂದದ ರಮಣಿ ಐಯ್ಯರ್, ಜೋಸೆಫ್ ಲೋಬೊ, ಸರಿತಾ ಚವ್ಹಾಣ್, ಸುಂದರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮಲಾೈಕಾ ಸಂಸ್ಥೆಯು ಸ್ವಂತಿಕೆಯ `ಯಸೋಮಾ' ಬ್ರಾಂಡ್‍ನ ಇಂಡಕ್ಶನ್ ಕುಕರ್, ಆರೋಗ್ಯದಾಯಕ ಸೇವನೆಗಾಗಿನ ಆರ್‍ಓ ಶುದ್ಧೀಕರಣ ನೀರಿನ ಯಂತ್ರ ಮತ್ತು ಮಿಕ್ಸರ್ ಗ್ರೈಂಡರ್ ಉತ್ಫಾಧಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಈ ಎಲ್ಲಾ ಮತ್ತು ಸಂಸ್ಥೆಯು ಮಾರಾಟ ಮಾಡುತ್ತಿರುವ ಜಗತ್ಫ್ರಸಿದ್ಧ್ಧ ಬ್ರಾಂಡ್‍ಗಳ ಗೃಹಪಯೊ ೀಗಿ, ಇನ್ನಿತರ ಎಲ್ಲಾ ವಸ್ತುಗಳ ಖರೀದಿಯಲ್ಲೂ ಆತ್ಯಾಕರ್ಷಕ ಹಾಗೂ ರಿಯಾಯಿತಿ ದರಗಳ ಲಾಭಾಂಶ ನೀಡುತ್ತಿದೆ. ಮುಂಬಯಿ ನಗರದಾದ್ಯಂತ ಅನೇಕ ಶಾಖೆಗಳ ಮುಖೇನ ವ್ಯವಹಾರಿಸುತ್ತಿರುವ ಮಲಾೈಕಾ ಸಮೂಹ ವರ್ಣ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉತ್ಪಾಧಿತ ವರ್ಣ ಏರ್‍ಕೂಲರ್ಸ್‍ಗಳ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಪ್ರಧಾನ ವಿತರಕರ ಸಂಸ್ಥೆಯಾಗಿದೆ.

ತವರೂರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ತೊಕ್ಕುಟ್ಟು, ಬಿ.ಸಿ.ರೋಡ್, ಪುತ್ತೂರು ಇಲ್ಲಿ ಶಾಖೆಗಳನ್ನು ಹೊಂದಿರುವ ಮಲಾೈಕಾ ಸಂಸ್ಥೆಯು ಮಲಾೈಕಾ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಯ್ಟಿ ಲಿಮಿಟೆಡ್ ಮೂಲಕ ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆಯನ್ನೊದಗಿಸುತ್ತಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here