Monday 29th, April 2024
canara news

ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕಸಹಭಾಗಿತ್ವಅತ್ಯಗತ್ಯ :ಡಾ| ಹೆಗ್ಗಡೆ

Published On : 10 Jun 2017   |  Reported By : Rons Bantwal


ಧಾರವಾಡ: ಪ್ರಾಕೃತಿಕವಾಗಿ ಲಭ್ಯವಿರುವ ಸಂಪನ್ಮೂಲಗಳ ಅತಿಯಾದಬಳಕೆಯಿಂದ ಪ್ರಾಕೃತಿಕಅಸಮತೋಲನ ತಲೆದೋರಿದ ಪರಿಣಾಮಜನಸಾಮಾನ್ಯರ ಬದುಕುದುಸ್ತರವಾಗಿದೆ. ಪ್ರಾಕೃತಿಕ ಸಂಪನ್ಮೂಲಗಳ ಪೈಕಿ ನೀರುಅತ್ಯಂತಅಮೂಲ್ಯವಾದುದು.ಆದುದರಿಂದ ನೀರಿನಎಚ್ಚರಿಕೆಯ ಬಳಕೆಯ ವಿಚಾರದಲ್ಲಿಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು.ನಮ್ಮ ಪೂರ್ವಜರಲ್ಲಿ ಕೆರೆಹೂಳೆತ್ತುವ ಜವಾಬ್ದಾರಿ ಸ್ಥಳೀಯರದ್ದು ಎಂಬ ಭಾವನೆಇತ್ತುಗ್ರಾಮಸ್ಥರೆಲ್ಲ ಸೇರಿ ಕೆರೆಗಳ ಹೂಳೆತ್ತಿ ಕೆರೆಯನ್ನು ಸಂರಕ್ಷಣೆ ಮಾಡುತ್ತಿದ್ದರು.ಆದರೆ ಕಾಲ ಬದಲಾದಂತೆಕೆರೆಹೂಳೆÉತ್ತುವ ಹಾಗೂ ಸಂರಕ್ಷಿಸುವಜವಾಬ್ದಾರಿ ಸರಕಾರದ್ದು ಎಂಬ ಧೋರಣೆಗ್ರಾಮಸ್ಥರಲ್ಲಿ ಮೂಡಿದೆ.ಈ ಧೋರಣೆ ಬದಲಾಗಬೇಕು.ಸಾರ್ವಜನಿಕ ಸಂಘ ಸಂಸ್ಥೆಗಳು, ಉದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಆರ್ಥಿಕವಾಗಿ ಸಂಪನ್ನರಾದವರುಸ್ವಯಂ ಪ್ರೇರಣೆಯಿಂದ ಕೆರೆಗಳ ಸಂರಕ್ಷಣೆಯಲ್ಲಿಗ್ರಾಮಸ್ಥರಿಗೆಸಹಾಯಹಸ್ತಚಾಚಬೇಕಾದ್ದು ಇಂದಿನ ಅವಶ್ಯಕತೆಯಾಗಿದೆಎಂಬುದಾಗಿಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರುಕರೆ ನೀಡಿದರು.ಅವರುಧಾರವಾಡತಾಲೂಕಿನದೇವರ ಹುಬ್ಬಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಹಾಗೂ ಕೆರೆಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿಅಭಿವೃದ್ಧಿಪಡಿಸಲಾದ“ಹುಗ್ಗಿ ಕೆರೆ”ಕಾಮಗಾರಿಯ ಹಸ್ತಾಂತರವನ್ನು ನೆರೆವೇರಿಸಿ ಮಾತನಾಡುತ್ತಿದ್ದರು.

ನೀರಿನಅಭಾವ ನೀಗಿಸಲು ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.ಸರಕಾರದಜೊತೆ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ನಾಗರಿಕರುಕೈಜೋಡಿಸಲೇಬೇಕಾದ ಅನಿವಾರ್ಯತೆಯಿದೆ.ಈ ನಿಟ್ಟಿನಲ್ಲಿಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆರಾಜ್ಯದಲ್ಲಿ 84 ಕೆರೆಗಳ ದುರಸ್ತಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.ಪ್ರಸಕ್ತ ಸಾಲಿನಲ್ಲಿರಾಜ್ಯದಲ್ಲಿ ಮತ್ತೆ 126 ಕೆರೆಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂಬುದಾಗಿ ಘೋಷಿಸಿದರು.

ದಿವ್ಯ ಸಾನಿಧ್ಯವನ್ನು ವಹಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದತಯಾರಿಸಲಾದ ಬೀಜದುಂಡೆ(ಸೀಡ್‍ಬಾಲ್)ಗಳನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದದೇವರಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿ ಮಹಾಸ್ವಾಮಿಗಳು ಮಾತನಾಡುತ್ತಾ ದೇವರಹುಬ್ಬಳ್ಳಿಯ ಹುಗ್ಗಿ ಕೆರೆಗೆ ಶತಮಾನದಇತಿಹಾಸಇದೆ. ಒಂದುಕಾಲದಲ್ಲಿಇಡೀಗ್ರಾಮಕ್ಕೆಕುಡಿಯುವ ನೀರಿನ ಮೂಲಇದಾಗಿತ್ತು.ಆದರೆ ನೀರಿನಅತಿಶೋಷಣೆಯಿಂದ ನೀರಿನಅಭಾವತೆಲದೋರಿದೆ.ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ನೆರವಿನೊಂದಿಗೆ ಗ್ರಾಮಸ್ಥರು ನೀಡಿದ ಸಹಕಾರದಿಂದಾಗಿಹಾಗೂ ವರುಣನಕೃಪೆಯಿಂದಕೆರೆ ಪೂರ್ತಿತುಂಬಿ ಗತವೈಭವದೊಂದಿಗೆ ಮತ್ತೆ ಕಂಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡಜಿಲ್ಲಾ ನಿರ್ದೇಶಕ ದಿನೇಶ್ ಎಂ.ಪ್ರಾಸ್ತಾವಿಕವಾಗಿ ಮಾತನಾಡಿ ದೇವರಹುಬ್ಬಳ್ಳಿ ಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ರೂ.11.00 ಲಕ್ಷ ಹಾಗೂ ಸ್ಥಳೀಯರ ನಗದು ಹಾಗೂ ಶ್ರಮದರೂಪದ ರೂ.13.50 ಲಕ್ಷ ವಿನಿಯೋಗಿಸಲಾಗಿದ್ದುಇದೊಂದುಸಹಭಾಗಿತ್ವದಕಾರ್ಯಕ್ರಮವಾಗಿರೂಪುಗೊಂಡಿದೆಎಂದರು.ಗ್ರಾಮ ಪಂಚಾಯತ್‍ನಅಧ್ಯಕ್ಷೆ ಶ್ರೀಮತಿ ಮಂಜುಳಾ ಕೋಟಿಅಧ್ಯಕ್ಷತೆ ವಹಿಸಿದ್ದರು.ಧರ್ಮಸ್ಥಳಯೋಜನೆಯಧಾರವಾಡ ಪ್ರಾದೇಶಿಕ ನಿರ್ದೇಶಕಎನ್. ಜಯಶಂಕರ ಶರ್ಮ, ಜಿಲ್ಲಾ ಪಂಚಾಯತ್ ಸದಸ್ಯ ನಿಂಗಪ್ಪ ಮಾ. ಘಾಟಿನ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪಕ್ಕೀರವ್ವ ನಾಯಕ, ಕೆರೆಅಭಿವೃದ್ಧಿ ಸಮಿತಿಅಧ್ಯಕ್ಷ ಸುರೇಶಗೌಡಕರಿಗೌಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಯೋಜನಾಧಿಕಾರಿಉಲ್ಲಾಸ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here