Monday 29th, April 2024
canara news

ಜೂ.11: ಪೌದನಪುರ ತ್ರೀಮೂರ್ತಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ

Published On : 10 Jun 2017   |  Reported By : Rons Bantwal


ಬೊರಿವಲಿ ಪೂರ್ವದ ಕ್ಷೇತ್ರಕ್ಕೆ ಪುರಪ್ರವೇಶಗೈದ ಗಣಿನಿ ಆರ್ಯಿಕಾ 105 ಜ್ಞಾನಮತಿ ಮಾತಾಜಿ


ಮುಂಬಯಿ, ಜೂ.09: ಜಗತ್ತಿಗೆ ಅಸಿ, ಮಸಿ, ಕೃಷಿ, ಶಿಕ್ಷಣ, ವಾಣಿಜ್ಯ, ಶಿಲ್ಪ ಇತ್ಯಾದಿಗಳನ್ನು ತಿಳಿಸಿದ ಪ್ರಥಮ ತೀರ್ಥಂಕರ ಭಗವಾನ್ ಆದಿನಾಥ ಸ್ವಾಮಿ, ಹಾಗೂ ಈ ಯುಗದ ಪ್ರಥಮ ಮೋಕ್ಷಗಾಮಿ ಭಗವಾನ್ ಬಾಹುಬಲಿ, ಹಾಗು ಯಾರಿಂದಾಗಿ ನಮ್ಮ ದೇಶವು ಭಾರತ ಎಂದು ಕರೆಯಲ್ಪಟ್ಟಿತೋ, ಅಂತಹ ಪ್ರಥಮ ಚಕ್ರವರ್ತಿ, ಕೇವಲಿ ಭರತ ಸ್ವಾಮಿಯ ತ್ರಿಮೂರ್ತಿಗಳಿರುವ ಕ್ಷೇತ್ರ ಮುಂಬಯಿಯ ಬೊರಿವಲಿಯ ರಾಷ್ಟ್ರೀಯ ಉದ್ಯಾನವನದೊಳಗಿರುವ ಪೌದನಪುರ ತ್ರೀಮೂರ್ತಿ ಕ್ಷೇತ್ರ. ಸುಮಾರು 50 ವರ್ಷಗಳ ಹಿಂದೆ ಆಚಾರ್ಯ 108 ನೇಮಿಸಾಗರ ಮಹಾರಾಜರಿಂದ ಪ್ರತಿಷ್ಟಾಪಿಸಲ್ಪಟ್ಟ ಈ ಕ್ಷೇತ್ರದಲ್ಲಿ ಈಗ ಮಹಾಮಸ್ತಕಾಭಿಷೇಕದ ಸಂಭ್ರಮ. ಪ್ರಥಮ ತೀರ್ಥಂಕರ, ಪ್ರಥಮ ಮೋಕ್ಷಗಾಮಿ ಹಾಗು ಪ್ರಥಮ ಚಕ್ರವರ್ತಿಯ 28 ಅಡಿ ಎತ್ತರದ ಜಿನಮೂರ್ತಿಗಳಿರುವ ಪವಿತ್ರ ಕ್ಷೇತ್ರ ಪೌದನಪುರ.

ದಿನಾಂಕ ಜೂ.11ರ ಆದಿತ್ಯವಾರ ಗಣಿನಿ ಆರ್ಯಿಕಾ 105 ಜ್ಞಾನಮತಿ ಮಾತಾಜಿ ಅವರ ಹಾಗೂ ಸಂಘದ ದಿವ್ಯೋಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ನೆರವೇರಲಿದೆ. ಮುಂಬಯಿಯ ವಿಹಾರದಲ್ಲಿರುವ ಮಾತಾಜಿಯವರ ಸಂಘವು ಜೂ.4 ರಂದು ಬೊರಿವಿಲಿಯ ಭವ್ಯ ಪುರಪ್ರವೇಶಗೈದಿದ್ದು ಪೌದನಪುರದಲ್ಲಿ ಈಗಾಗಲೆ ಭಗವಾನ್ ಆದಿನಾಥ ಸ್ವಾಮಿಯ ಪಂಚಕಲ್ಯಾಣ ವಿಧಿಗಳು ನೆರವೇರುತ್ತಿವೆ.

ಕಾರ್ಯಕ್ರಮದ ಅಂಗವಾಗಿ ಆದಿತ್ಯವಾರ ಬೆಳಿಗ್ಗೆ 8.00 ಗಂಟೆಯಿಂದ ಜಿನಮೂರ್ತಿಗಳಿಗೆ ವಿವಿಧ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು , ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬೊರಿವಲಿ ಸಂಸದ ಗೋಪಾಲ್ ಶೆಟ್ಟಿ, ಜೈನ ಸಮಾಜದ ಪ್ರಮುಖರು, ಅನೇಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.

ಮುಂಬಯಿಯ ವಿವಿಧ ಪ್ರದೇಶಗಳಿಂದ ಕ್ಷೇತ್ರಕ್ಕೆ ಉಚಿತ ಬಸ್ಸಿನ ವ್ಯವಸ್ತೆಯನ್ನು ಕಲ್ಪಿಸಲಾಗಿದೆ. ಶ್ರಾವಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪುಣ್ಯಸಂಚಯ ಮಾಡಿಕೊಳ್ಳಬೇಕೆಂದು ಪೌದನಪುರ ಮಹಾಮಸ್ತಕಾಭಿಷೇಕ ಸಮಿತಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here