Monday 29th, April 2024
canara news

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೃಕ್ಷಾರೋಹಣ ಕಾರ್ಯಕ್ರಮ

Published On : 10 Jun 2017   |  Reported By : Rons Bantwal


ಬೈಂದೂರು, ಜೂ.10: ಹಸಿರೇ ಉಸಿರು, ಪರಿಸರ ನಾಶವಾದರೆ ಜೀವಕೋಟಿಗಳ ನಾಶ ಎನ್ನುವ ಸತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕಎದ ಸೋಮವಾರ (ಜೂ.05) ಬೈಂದೂರು ನಾವುಂದ ಅಲ್ಲಿನ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅಥಿüತಿಯಾಗಿ ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಪರಿಸರ ರಕ್ಷಣೆಯ ಬಗ್ಗೆ ತಿಳಿಸಿದರು.

ಗೌರವ ಅತಿಥಿü ಪುಂಡಲೀಕ ನಾಯಕ್ ಹಾಗೂ ವಿದ್ಯಾಥಿರ್üಗಳು ಪರಿಸರ ಕಾಳಜಿ ಹೇಗೆ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಎಂ.ಜಿ ಬನಾವಳಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು ವಿದ್ಯಾಥಿರ್üಗಳು ಪರಿಸರ ಪ್ರೇಮ ಹಾಗು ಪರಿಸರ ಜಾಗೃತಿಯನ್ನು ಬಾಲ್ಯದಲ್ಲಿಯೇ ಬೆಳೆಸಿ ಕೊಳ್ಳಬೇಕು ಎಂದು ಕರೆಯಿತ್ತರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಶಂಕರ ಪೂಜಾರಿ ಆಡಳಿತಾಧಿಕಾರಿ ಎ.ಬಿ ಪೂಜಾರಿ ಉಪಸ್ಥಿತರಿದ್ದು, ಕು| ಪೂಜಾ ಸ್ವಾಗತಿಸಿದರು. ಕು| ಪುಣ್ಯಶ್ರೀ ಮತ್ತು ಕು| ಸ್ವೀಕೃತಿ ಕಾರ್ಯಕ್ರಮ ನಿರೂಪಿಸಿದರು. ಕು| ನಿಖಿಶಾ ಕ್ರಮವಾಗಿ ಧನ್ಯವಾದ ಸಮರ್ಪಿಸಿದರು.

ಶಾಲಾ ವಠಾರದಲ್ಲಿ ತೇಗ, ಬಾದಾಮಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಯ ಪಣ ತೊಡಲಾಯಿತು. ಬಳಿಕ ಪರಿಸರ ಜಾಗೃತಿ ಜಾಥಾವನ್ನು ಶ್ರೀ ಅಗಸ್ತ್ಯೇಶ್ವರ ದೇವಾಲಯದ ತನಕ ಹಮ್ಮಿಕೊಂಡು, ಬಿಲ್ವ ಪತ್ರೆ ಹಾಗೂ ತೇಗದ ಗಿಡಗಳನ್ನು ದೇವಾಲಯದ ವಠಾರದಲ್ಲಿ ನೆಡಲು ಆಡಳಿತಾಧಿಕಾರಿ ಪರಶುರಾಮ ಅವರಿಗೆ ಹಸ್ತಾಂತರಿಸಲಾಯಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here