Thursday 3rd, July 2025
canara news

ದ್ವಿಚಕ್ರ ವಾಹನ ವಿತರಣೆ ಹಾಗೂ ಇಫ್ತಾರ್ ಮೀಟ್

Published On : 11 Jun 2017   |  Reported By : Rons Bantwal


ತೊಕ್ಕೊಟ್ಟು, ಜೂ.11: ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಉತ್ತರ ಕರ್ನಾಟಕದಲ್ಲಿ ಕಾರ್ಯನಿರತರಾಗಿರುವ ಇಹ್ಸಾನ್ ದಾಈಗೆ ದ್ವಿಚಕ್ರ ವಾಹನ ವಿತರಣೆ, ಬದ್ರ್ ಮೌಲಿದ್ ಮಜ್ಲಿಸ್ ಹಾಗೂ ಕ್ಯಾಂಪಸ್ ಇಫ್ತಾರ್ ಮೀಟ್ ತೊಕ್ಕೋಟಿನ ಹಿದಾಯ ಪ್ಯಾಲೇಸ್ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಡಿವಿಶನ್ ಅಧ್ಯಕ್ಷ ಯಾಕೂಬ್ ನಈಮಿ ಅಲ್-ಅಫ್ಳಲಿ ಉದ್ಘಾಟಿಸಿದರು. ಮುಬಾರಕ್ ಸಖಾಫಿ ಮಂಚಿಲ ಮೌಲಿದ್ ಮಜ್ಲಿಸ್ಗೆ ನೇತೃತ್ವ ನೀಡಿದರು.

ಮುತ್ತಲಿಬ್ ಝುಹ್ರಿ, ಹಾಜಿ ಖಾದರ್ ಸ್ವದೇಶಿ, ಅಬ್ದುಲ್ ನಾಸಿರ್ ಕಲ್ಕಟ್ಟ, ರಿಯಾಝ್ ಮಾರಿಪಳ್ಳ, ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ, ಕೋಶಾಧಿಕಾರಿ ಜುನೈದ್ ಮದನಿ ನಗರ, ರಿಲೀಫ್ ಸರ್ವಿಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ, ಮಾಧ್ಯಮ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್, ಎಸ್ಬಿಎಸ್ ಕನ್ವೀನರ್ ಸಾಲಿಂ ಪಟ್ಲ ಉಪಸ್ಥಿತರಿದ್ದರು.

ರಿಲೀಫ್ ಸರ್ವಿಸ್ ಚೇರ್ಮ್ಯಾನ್ ಅಲ್ತಾಫ್ ಕುಂಪಲ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here