Monday 29th, April 2024
canara news

ಸಾಂಸ್ಕೃತಿಕ-ಮನೋರಂಜನಾ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಗಾಣಿಗ ಸಮಾಜ ಮುಂಬಯಿ ಇದರ 20ನೇ ವರ್ಧಂತ್ಯೋತ್ಸವಕ್ಕೆ ಚಾಲನೆ

Published On : 12 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.12: ಕಳೆದ ಎರಡು ದಶಕಗಳಿಂದ ಮಹಾನಗರ ಮುಂಬಯಿಯಲ್ಲಿ ಗುರುತರ ಸೇವೆಯ ಮೂಲಕ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡು ಸಮುದಾಯದ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಗಾಣಿಗ ಸಮಾಜ ಮುಂಬಯಿ ಸಂಸ್ಥೆಯು ತನ್ನ 20ನೇ ವಾರ್ಷಿಕೋತ್ಸÀ್ಸವವನ್ನು ಇಂದಿಲ್ಲಿ ಆದಿತ್ಯವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ವಿಜೃಂಭನೆಯಿಂದ ಆಚರಿಸಿತು.

ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅಧ್ಯಕ್ಷತೆಯಲ್ಲಿ ದಿನಪೂರ್ತಿಯಾಗಿಸಿ ಸಂಭ್ರಮಿಸಿದ ದ್ವಿದಶ ವರ್ಧಂತ್ಯೋತ್ಸವ ಸಂಭ್ರಮಕ್ಕೆ ಪೂರ್ವಹ್ನ ಕುರ್ಲಾದಲ್ಲಿನ ಹಿರಿಯ ಸಮಾಜ ಸೇವಕ ವೆಂಕಟೇಶ್ ಎಸ್.ಗಾಣಿಗ ಮತ್ತು ಜಲಜಾ ವಿ.ಗಾಣಿಗ ದಂಪತಿ ದೀಪ ಬೆಳಗಿಸಿ ವಾರ್ಷಿಕೋತ್ಸವಕ್ಕೆ ಚಾಲನೆಯನ್ನೀಡಿ ಶುಭಕೋರಿದರು.

ಈ ಶುಭಾವಸರದಲ್ಲಿ ಅತಿಥಿüಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಬಾರ್ಕೂರು ಅಧ್ಯಕ್ಷ ಕುತ್ಪಾಡಿ ಗೋಪಾಲ್, ದಕ್ಷಿಣ ಕನ್ನಡ ಜಿಲ್ಲಾ ಸೋಮಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಅಧ್ಯಕ್ಷ ಹೆಚ್.ಟಿ ನರಸಿಂಹ, ಮಾಜಿ ಕಾರ್ಯದರ್ಶಿ ಪ್ರತಾಪ್‍ಚಂದ್ರ ಕುತ್ಪಾಡಿ, ಥಾಣೆ ಉದ್ಯಮಿ ರತ್ನಾಕರ್ ಎ.ಶೆಟ್ಟಿ ಹಾಗೂ ಗಾಣಿಗ ಸಮಾಜ ಮುಂಬಯಿ ಇದರ ಉಪಾಧ್ಯಕ್ಷ ಭಾಸ್ಕರ ಎಂ.ಗಾಣಿಗ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಕೋಶಾಧಿಕಾರಿ ಜಯಂತ್ ಪಿ.ಗಾಣಿಗ, ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್, ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಆರ್.ಕುತ್ಪಾಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ತೋನ್ಸೆ, ಯು. ಬಾಲಚಂದ್ರ ಕಟಪಾಡಿ, ಸೀತಾರಾಮ್ ಎಂ.ಆರ್, ಕೆ.ಶಾಂತಾರಾಮ ಮೂರ್ತಿ, ಸದಾನಂದ ಕಲ್ಯಾಣ್ಪುರ, ರಾಜೇಶ್ ಕುತ್ಪಾಡಿ, ಆರತಿ ಸತೀಶ್ ಗಾಣಿಗ, ಆಶಾ ಹರೀಶ್ ತೋನ್ಸೆ, ಮಮತಾ ದೇವೆಂದ್ರ ರಾವ್, ದಿನೇಶ್ ರಾವ್ ಟಿ.ಎಸ್, ದೇವೆಂದ್ರ ರಾವ್, ಬಾಲಕೃಷ್ಣ ರಾವ್, ನರೇಂದ್ರ ರಾವ್, ಗೋಪಾಲಕೃಷ್ಣ ಗೋವಿಂದ ಗಾಣಿಗ (4ಉ), ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಯಂಧರ್, ರಮೇಶ್ ಎನ್.ಗಾಣಿಗ, ಗಂಗಾಧರ ಎನ್.ಗಾಣಿಗ, ರೋಹನ್ ಎನ್.ಆರ್ ರಾವ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಗಾಣಿಗ ಬಂಧುಗಳು ಮಕ್ಕಳನ್ನೊಳಗೊಂಡು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ವಿದ್ಯೋದಯ ಸಮಿತಿ ಪ್ರಸ್ತುತಿಯಲ್ಲಿ ಶ್ರೀರಾಮ್ ಆತ್ರಿ ಅವರು `ಮಾನಸಿಕ ಮನಸ್ಸಿನ ಪ್ರೇರಣೆ ನಿರ್ವಹಿಸುವ ಶೈಕ್ಷಣಿಕ' ಕಾರ್ಯಕ್ರಮ ನೀಡಿದರು.

ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣನನ್ನು ಸ್ತುತಿಸಿ, ಶ್ರೀ ವ್ಯಾಸ ಹಾಗೂ ಮಹಾಗಣಪತಿಗೆ ನಮಿಸಿ ವಾರ್ಷಿಕೋತ್ಸವಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೀದಲಾಯಿತು. ವೀಣಾ ದಿನೇಶ್ ಗಾಣಿಗ ಪ್ರಾರ್ಥನೆಯನ್ನಾಡಿ ದರು. ಮಾ| ರೂಪಕ್ ಸದಾನಂದ್ ಭಗದ್ಗೀತಾ ವಾಚಿಸಿದರು. ಮಾ| ಶ್ರೇಯಸ್ ಭಟ್ಕಳ್ ಕ್ಯಾಸಿಯೋ ಮೂಲಕ ದೇವರನ್ನು ಸ್ತುತಿಸಿದರು. ಮಾಜಿ ಕಾರ್ಯದರ್ಶಿ ಬಿ.ವಿ ರಾವ್ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮಮತಾ ದೇವೆಂದ್ರ ರಾವ್ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆರತಿ ದಿನೇಶ್ ಗಾಣಿಗ ಛದ್ಮವೇಷ ಸ್ಪರ್ಧೆ ನಿರ್ವಾಹಿಸಿದರು. ಚಂದ್ರಶೇಖರ್ ಆರ್.ಗಾಣಿಗ ಧನ್ಯವದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here