Monday 29th, April 2024
canara news

ಶ್ರೀ ರಜಕ ಸಂಘ ಮುಂಬಯಿ ಸಂಸ್ಥೆ ಜರುಗಿಸಿದ 80ನೇ ವಾರ್ಷಿಕ ಮಹಾಸಭೆ

Published On : 12 Jun 2017   |  Reported By : Rons Bantwal


ಸಮುದಾಯದ ಐಕ್ಯತೆ ಬಲಪಡಿಸೋಣ: ಸತೀಶ್ ಎಸ್.ಸಾಲಿಯಾನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.11: ಒಂದು ಸಂಸ್ಥೆಯಲ್ಲಿ ಸದಸ್ಯರ ಸಂಖ್ಯಾ ವರ್ಧನೆಗೊಂಡಾಗ ಸಂಘವು ವೃದ್ಧಿಗೊಂಡು ಸಮಾಜದ ಉನ್ನತಿ ಸಾಧ್ಯವಾಗುವುದು. ಸಮಾಜದಲ್ಲಿನ ಪ್ರತಿಭಾನ್ವಿತರ ಗುರುತಿಸುವಿಕೆ, ಯುವಜನರಿಗೆ ಪೆÇ್ರೀತ್ಸಾಹ, ಮಕ್ಕಳ ವಿಶೇಷವಾಗಿ ಮಕ್ಕಳನ್ನು ಸಾಧ್ಯವಾದಷ್ಟು ವಿದ್ಯಾವಂತರನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. ಶೈಕ್ಷಣಿಕ ಪೆÇ್ರೀತ್ಸಾಹದಿಂದ ಮಕ್ಕಳು ಸುಶಿಕ್ಷಿತರಾದಂತೆ ಸಮುದಾಯವೂ ಸಧೃಡ ಗೊಳ್ಳುವು ದು ಎಂದು ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಅಭಿಪ್ರಾಯ ಪಟ್ಟರು.

ಶ್ರೀ ರಜಕ ಸಂಘ ಮುಂಬಯಿ ತನ್ನ 80ನೇ ವಾರ್ಷಿಕ ಮಹಾ ಸಭೆಯನ್ನು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ಜರುಗಿಸಿದ್ದು, ಸಂಘದ ಪದಾಧಿಕಾರಿಗಳನ್ನು ಒಳಗೊಂಡು ಅಧ್ಯಕ್ಷ ಸತೀಶ್ ಸಾಲಿಯಾನ್ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನೀಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮಲ್ಲಿನ ಭ್ರಾತೃಭಾವನೆ ಭದ್ರಪಡಿಸಿ ಸಹಾನೂಭೂತಿಯ ಚಿಂತನೆಯನ್ನು ಮೈಗೂಡಿಸುವ ಅಗತ್ಯವಿ ದ್ದು ಆ ಮೂಲಕ ಸಾಂಘಿಕವಾಗಿ ಸಮುದಾಯದ ಐಕ್ಯತೆ ಬಲಪಡಿಸೋಣ ಎಂದೂ ಸತೀಶ್ ಸಾಲಿಯಾನ್ ಸಮಾಜ ಬಂಧುಗಳಿಗೆ ಕರೆಯಿತ್ತರು.

ಸಭೆಯಲ್ಲಿ ವಿಶೇಷವಾಗಿ ಆಮಂತ್ರಿತರಾಗಿ ರಜಕ ಸಂಘ ಮೂಲ್ಕಿ ಅಧ್ಯಕ್ಷ ಸಂಜೀವ ಮಡಿವಾಳ, ಹಿರಿಯ ಸದಸ್ಯರುಗಳಾದ ಪಿ.ಎಂ ಸಾಲ್ಯಾನ್, ಪಿ.ಕೃಷ್ಣ, ಎನ್.ಯು ಕುಂದರ್, ಎಸ್.ಯು ಕುಂದರ್, ಸಂಜೀವ ಎಂ.ಸಾಲ್ಯಾನ್, ಸುಂದರ್ ಪುತ್ರನ್, ನೀಲಯ್ಯ ಗುಜರನ್, ಅಶೋಕ್ ಕುಂದರ್, ಉಮೇಶ್ ಸಾಲ್ಯಾನ್, ಚಂದ್ರಹಾಸ ಗುಜರನ್ ಉಪಸ್ಥಿತರಿದ್ದು, ಅಧ್ಯಕ್ಷರು ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಜೊತೆ ಕೋಶಾಧಿಕಾರಿ ಸುಭಾಷ್ ಸಾಲ್ಯಾನ್ ಉಪಸ್ಥಿತರಿದ್ದು ಸಭೆಯ ಮಧ್ಯಾಂತರದಲ್ಲಿ ರಜಕರಲ್ಲಿನ ಪ್ರತಿಭಾನ್ವಿತ, ಈ ಬಾರಿಯ ವಿವಿಧ ಪರೀಕ್ಷೆಗಳಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಬಹುಮಾನ ವಿತರಿಸಿ ಪೆÇ್ರೀತ್ಸಾಹಿಸಿ ಶುಭಾರೈಸಿದರು. ದಾಂಪತ್ಯ ಬಾಳಿನ ಸ್ವರ್ಣ ಸಂಭ್ರಮ ಪೂರೈಸಿದ ಎಲ್.ಪಿ ಕುಂದರ್ ಮತ್ತು ಸುನಂದ ಎಲ್. ಕುಂದರ್ ಮತ್ತು ಸದಾನಂದ ಸಾಲ್ಯಾನ್ ಮತ್ತು ದೇವಕಿ ಸದಾನಂದ್ ದಂಪತಿಗಳನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಸ್ತುತಿ ಸಾಲ್ಯಾನ್, ಸಮೃದ್ಧಿ ಸಾಲ್ಯಾನ್, ದೀಕ್ಷಿತಾ ಗುಜರನ್, ಶ್ರದ್ಧಾ ಬನ್ನಾನ್ ಅವರನ್ನು ಸನ್ಮಾನಿಸಲಾಯಿತು. ಮತ್ತು ಗತ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾಥಿರ್üಗಳಾದ ಪೂರ್ವಿ ಜಗದೀಶ್ ಸಾಲ್ಯಾನ್, ಸೃಷ್ಟಿ ಸಾಲ್ಯಾನ್, ದೀಪ್ತಿ ಸಾಲ್ಯಾನ್ ಅವರಿಗೆ ಪ್ರತುಭಾ ಪುರಸ್ಕಾರ ಪ್ರಧಾನಿಸಿ ಅಭಿನಂದಿಸಿದರು.

ಸಭೆಯಲ್ಲಿ ಸಭೆಯಲ್ಲಿ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ.ಗುಜರನ್, ಯುವ ವಿಭಾಗದ ಅಧ್ಯಕ್ಷ ಮನೀಷ್ ಕುಂದರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತ್ರಾ ಡಿ.ಸಾಲ್ಯಾನ್, ಶಶಾಂಕ್ ಸಾಲ್ಯಾನ್, ಸಂಜೀವ್ ಎಕ್ಕಾರ್, ಭಾಸ್ಕರ್ ಕುಂದರ್ ಅಂತರಿಕ ಲೆಕ್ಕ ಪರಿಶೋಧಕರಾದ ಪೂವಣಿ ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತಿತರರು ಹಾಜರಿದ್ದರು.

ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಭೆ ಆರಂಭ ಗೊಂಡಿತು. ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಜೊತೆ ಕೋಶಾಧಿಕಾರಿ ಸಿಎ| ವಿಜಯ್ ಕುಂದರ್ ಮತ್ತು ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನು ನೀಡಿದರು. ಸದಸ್ಯ ಬಂಧುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಲಹೆ ಸೂಚನೆ ನೀಡಿ ಸಂಘದ ಉನ್ನತಿಗಾಗಿ ಹಾರೈಸಿದರು. ಸಭೆಯಲ್ಲಿ ಅಗಲಿದ ಸದಸ್ಯರು, ಹಿತೈಷಿಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು. ಜೊತೆ ಕಾರ್ಯದರ್ಶಿ ಕಿರಣ್ ಕುಂದರ್ ಗತ ವಾರ್ಷಿಕ ವರದಿ ವಾಚಿಸಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪನ ಕಂಡಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here