Monday 29th, April 2024
canara news

ಬಿಎಸ್‍ಕೆಬಿಎ ಗೋಕುಲ ಯೋಜನೆ `ವಿಷನ್-2020' ಸಹಾಯಾರ್ಥ

Published On : 13 Jun 2017   |  Reported By : Rons Bantwal


ಷಣ್ಮುಖಾನಂದ ಸಭಾಗೃಹದಲ್ಲಿ ರಂಗೇರಿದ `ರಾಧಾ ರಾಸ್ ಬಿಹಾರಿ' ಸಂಗೀತ ರೂಪಕ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.12: ಸಾಯನ್ ಅಲ್ಲಿನ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ ಗೋಕುಲ ಯೋಜನೆ `ವಿಷನ್-2020' ಸಹಾಯಾರ್ಥವಾಗಿ ಕಳೆದ ಭಾನುವಾರ ಸಂಜೆ ಸಯಾನ್ ಕಿಂಗ್ ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಸೇಕರೇಂದ್ರ ಸರಸ್ವತಿ ಸಭಾಗೃಹದಲ್ಲಿ ಬಾಲಿವುಡ್ ನಟಿ, ನೃತ್ಯಪಟು ಹೇಮಮಾಲಿನಿ ಬಳಗವು `ರಾಧಾ ರಾಸ್ ಬಿಹಾರಿ' ಸಂಗೀತ ನೃತ್ಯ ರೂಪಕ ಪ್ರಸ್ತುತ ಪಡಿಸಿತು.

ಪ್ರಸಿದ್ಧ ನೃತ್ಯ ವ್ಯವಸ್ಥಾಪಕ ಭೂಷಣ್ ಲಕ0ದ್ರಿ ಅವರ ನೃತ್ಯ ಸಂಯೋಜನೆಯಲ್ಲಿ ಪ್ರದರ್ಶಿಸಲ್ಪಟ್ಟ ಕಾರ್ಯಕ್ರಮವನ್ನು ನಾಟ್ಯವಿಹಾರ ಕಲಾಕೇಂದ್ರ ಮುಂಬಯಿ ಪ್ರಸ್ತುತ ಪಡಿಸಿತ್ತು. ಹಿಂದಿ ಚಲನಚಿತ್ರ ರಂಗದ ಸಂಗೀತ ದಿಗ್ಗಜರಾದ ರವೀಂದ್ರ ಜೈನ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ನೀಡಿದ್ದು, ಪ್ರಸಿದ್ಧ ಹಿನ್ನೆಲೆ ಗಾಯಕರುಗಳಾದ ಕವಿತಾ ಕೃಷ್ಣಮೂರ್ತಿ, ಸುರೇಶ್ ವಾಡ್ಕರ್, ರೂಪಕುಮಾರ್ ರಾಥೋಡ್ ಮತ್ತಿತರ ಕಲಾವಿದರು ಸಂಗೀತವನ್ನಿತ್ತರು.

ಈ ಶುಭಾವರಸರದಲ್ಲಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷ ವಾಮನ ಹೊಳ್ಳ, ಗೌರವ ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ ಮತ್ತು ವೈ.ಗುರುರಾಜ್ ಭಟ್, ಜೊತೆ ಕೋಶಾಧಿಕಾರಿಗಳಾದ ಅವಿನಾಶ್ ಶಂಕರ್ ಶಾಸ್ತ್ರಿ ಮತ್ತು ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ಆರ್.ಭಟ್, ಯುವ ವಿಭಾಗದ ಕಾರ್ಯಾಧ್ಯಕ್ಷ ಹರಿದಾಸ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಆದಿಯಲ್ಲಿ ಗೋಕುಲದ ಸ್ಮರಣ ಸಂಚಿಕೆಯನ್ನು ಹೆಸರಾಂತ ಹಾಸ್ಯಪಟು, ಕಾಮಿಡಿಕಿಂಗ್ ಜಾನಿ ಲಿವರ್ ಬಿಡುಗಡೆ ಗೊಳಿಸಿ ಶುಭಾರೈಸಿದರು. ನಂತರ ಜಾನಿ ಲಿವರ್ ತಮ್ಮ ಹಾಸ್ಯ ಹೊನಲಿನಿಂದ ಶ್ರೋತೃಗಳೊಂದಿಗೆ ನಗೆಗಡಲಿನಲ್ಲಿ ತೇಲಿಸಿದರು.

ಈ ಕಾರ್ಯಕ್ರದಲ್ಲಿ `ಗೋಕುಲವಾಣಿ' ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ವಿದ್ಯಾಥಿರ್ü ವೇತನ ಮತ್ತು ದತ್ತು ಸ್ವೀಕಾರ ಸಮಿತಿ ಕಾರ್ಯಧ್ಯಕ್ಷ ರಾಮಕೃಷ್ಣ ಶ್ರೀನಿವಾಸ ರಾವ್, ಗೋಕುಲ ಕಲಾವೃಂದ ಸಮಿತಿ ಕಾರ್ಯಧ್ಯಕ್ಷ ಪ್ರಶಾಂತ್ ಆರ್.ಹೆರ್ಲೆ, ಸದಸ್ಯತ್ವ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ವಿದ್ಯಾನಿಧಿ ಸಮಿತಿ ಕಾರ್ಯಧ್ಯಕ್ಷ ಬಿ.ನಾರಾಯಣ್, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೆÇೀತಿ, ದೇಣಿಗೆ ಸಮಿತಿ ಕಾರ್ಯಧ್ಯಕ್ಷೆ ಪಿ.ವಿನೋದಿನಿ ರಾಜೇಶ್ ರಾವ್, ಕಟ್ಟಡ ಸಮಿತಿ ಕಾರ್ಯಧ್ಯಕ್ಷ ಯು.ರವೀಂದ್ರ ರಾವ್, ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಶ್ರವಣದಳ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ಪ್ರಾದೇಶಿಕ ಚಟುವಟಿಕಾ ಸಮಿತಿ ಕಾರ್ಯಧ್ಯಕ್ಷ ಚಂದ್ರಶೇಖರ್ ಭಟ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಇಂದ್ರಾಣಿ ರಾವ್, ಶಾಂತಿಲಕ್ಷ್ಮೀ ಎಸ್. ಉಡುಪ, ಪಿ.ಶಿವರಾಮ ರಾವ್, ವನಿತಾ ಆರ್.ರಾವ್, ನಿಖಿಲ್ ಕೆ.ರಾವ್, ಶೋಭಾ ವಿ.ಉಡುಪ, ಹರೀಶ್ಚಂದ್ರ ಕೆ.ರಾವ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ಎ.ಶ್ರೀನಿವಾಸ ರಾವ್, ಚಂದ್ರಾವತಿ ಕೆ.ರಾವ್, ಕೆ.ಸುಬ್ಬಣ್ಣ ರಾವ್ ಹಾಗೂ ಹಲವಾರು ದಾಣಿಗಳು, ಹಿತೈಷಿಗಳು ಸೇರಿದಂತೆ ನೂರಾರು ಗಣ್ಯರು ಹಾಜರಿದ್ದರು.

ಉಪಾಧ್ಯಕ್ಷೆ ಶೈಲಿನಿ ಎ.ರಾವ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮೈಥಲಿ ರಾವ್ ಪ್ರಾರ್ಥನೆ ಹಾಡಿದರು. ಜಯಲಕ್ಷ್ಮೀ ಹೊಳ್ಳಾ ಮೈಥಲಿ ಅವರನ್ನು ಸತ್ಕರಿಸಿದರು. ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಹೇಮಮಾಲಿನಿ, ಭೂಷಣ್ ಲಕ0ದ್ರಿ ಮತ್ತು ಕೃಷ್ಣನ ಪಾತ್ರಧಾರಿ ರಾಹುಲ್ ಡಿ'ಸೋಜಾ ಅವರಿಗೆ ಶಾಲುಹೊದಿಸಿ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ವೆಬ್‍ಸೈಟ್ ಮತ್ತು ಫೇಸ್‍ಬುಕ್ ಚಟುವಟಿಕಾ ಸಮಿತಿ ಕಾರ್ಯಧ್ಯಕ್ಷ ಜಗದೀಶ್ ಜಿ.ಆಚಾರ್ಯ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ.ಪೆÇೀತಿ ವಂದನಾರ್ಪಣೆಗೈದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here