Friday 9th, May 2025
canara news

ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಎಸ್‍ಎಸ್‍ಸಿ ಫಲಿತಾಂಶ

Published On : 13 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.13: ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶವನ್ನು ಮಹಾರಾಷ್ಟ್ರ ಶಿಕ್ಷಣ ಮಂಡಳಿ ಇಂದಿಲ್ಲಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದ್ದು ಉತ್ತೀರ್ಣರಲ್ಲಿ ಈ ಬಾರಿಯೂ ವಿದ್ಯಾಥಿರ್üನಿಯರೇ ಮೇಲುಗೈ ಸಾಧಿಸಿದ್ದಾರೆ. ಇಡೀ ಮಹಾರಾಷ್ಟ್ರದಲ್ಲಿ 88.74% ಉತ್ತೀರ್ಣ ಫಲಿತಾಂಶ, ಮುಂಬಯಿ ನಗರದಾದ್ಯಂತ 90.09% ಫಲಿತಾಂಶ ಫಲಿಸಿದೆ.

ರಾಯನ್ ಇಂಟರ್‍ನೇಶನಲ್ ಸಮೂಹ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲೆಗಳಲ್ಲಿ ಒಂದಾದ ಬೊರಿವಿಲಿ ಪೂರ್ವದ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲುಗೆ 99.67% ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ 96.00% ಅಂಕಗಳೊಂದಿಗೆ ಕು| ಅಕ್ಷತಾ ಆರ್. ಕೊಲ್ತಾಕರ್ ವಿದ್ಯಾಥಿರ್üನಿ ಶಾಲೆಯಲ್ಲೇ ಪ್ರಥಮರೆಣಿಸಿದ್ದಾಳೆ. ಕು| ಮೆಘ್ನಾ ರಾಜೇಶ್ ಅಂತಿಕಾಡ್ ಹಾಗೂ ಕೃತಿ ಜತಿನ್ ಶಾಹ 94.00% ದ್ವಿತೀಯ ಸ್ಥಾನಗಳನ್ನು ಪಡೆದಿರುವರು. ತುಳು-ಕನ್ನಡ ವಿದ್ಯಾಥಿರ್üನಿ ಕು| ಮಾನ್ವಿತಾ ಡಿ.ಅಂಚನ್ 93.40% ಅಂಕಗಳೊಂದಿಗೆ ಡಿಸ್ಟಿಂಕ್‍ಶನ್‍ನೊಂದಿಗೆ ಪಾಸಾಗಿದ್ದು, ಇವರು ಮಂಗಳೂರಿನ ಮಣ್ಣಗುಡ್ಡೆ ಮೂಲದ ದೇವದಾಸ್ ಅಂಚನ್ ಮತ್ತು ಮಂಗಳೂರು ಅತ್ತಾವರ ಮೂಲದ ಶ್ರೀಮತಿ ಯಮಿನಿ ಅಂಚನ್ ದಂಪತಿ ಸುಪುತ್ರಿ ಆಗಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ತುಳು-ಕನ್ನಡಿಗ ವಿದ್ಯಾಥಿರ್üಗಳು ಉತ್ತೀರ್ಣರಾಗಿದ್ದಾರೆ ಎಂದು ಬಂಟ್ವಾಳ ಮೂಲದ ಶಾಲೆಯ ಪ್ರಾಂಶುಪಾಲೆ ಮಾರಿಯೆಟ್ ಫೆರ್ನಾಂಡಿಸ್ ತಿಳಿಸಿದ್ದಾರೆ.

 


MS. ANTHIKAD MEGHANA RAJESH Percentage : 94.00%
MS. SHAH KRUTI JATIN Percentage : 94.00%
MS. ANCHAN MANWITHA DEVDAS Percentage : 93.60%

MS. KOLTHARKAR AKSHATA RAJDEEP Percentage : 96.00%




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here