Friday 9th, May 2025
canara news

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಧಿಕಾರ ಸ್ವೀಕಾರ

Published On : 14 Jun 2017   |  Reported By : Canaranews Network


ಮಂಗಳೂರು: ಮಂಗಳೂರಿನ ನೂತನ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಆಯುಕ್ತ ಎಂ. ಚಂದ್ರಶೇಖರ್ ಅವರು ಅಧಿಕಾರವನ್ನು ಹಸ್ತಾಂತರಿಸಿದರು.ನೂತನ ಆಯುಕ್ತರಾದ ತಿಮ್ಮಪ್ಪ ರಾಮಪ್ಪ ಸುರೇಶ್ ಅವರು ಈ ಹಿಂದೆ ಬೆಂಗಳೂರಿನ ಅಗ್ನಿ ಶಾಮಕ ಸೇವಾ ವಿಭಾಗದ ಡಿಐಜಿ ಆಗಿದ್ದರು.1991ರಲ್ಲಿ ಡಿವೈಎಸ್ಪಿ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 1996ರಲ್ಲಿ ಎಸ್ಪಿ (ನಾನ್ ಎಕ್ಸಿಕ್ಯೂಟಿವ್) ಆಗಿ ಭಡ್ತಿ ಹೊಂದಿದ್ದರು.

2003ರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಯಾಗಿ ನಿಯುಕ್ತಿಗೊಂಡಿದ್ದರು. ಪ್ರಥಮವಾಗಿ ವಿಜಯ ಪುರದಲ್ಲಿ ಸೇವೆ ಮಾಡಿದ್ದರು. ಬಳಿಕ ಬಾಗಲಕೋಟೆ, ಉತ್ತರ ಕನ್ನಡ (1997- 90) ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.ಅನಂತರದ ವರ್ಷಗಳಲ್ಲಿ ಹುಬ್ಬಳ್ಳಿ - ಧಾರವಾಡಗಳಲ್ಲಿ ಡಿಸಿಪಿ, ಮೈಸೂರಿನಲ್ಲಿ ರಾಜ್ಯ ಗುಪ್ತಚರ ವಿಭಾಗ ಹಾಗೂ ಬಳಿಕ ಅಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ), ತುಮಕೂರು ಲೋಕಾಯುಕ್ತ ಎಸ್ಪಿ, ಬೆಳಗಾವಿಯಲ್ಲಿ ಅಡಿಶನಲ್ ಎಸ್ಪಿ ಆಗಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here