Saturday 4th, May 2024
canara news

ಜೂ. 16ರಂದು ದ.ಕನ್ನಡ ಜಿಲ್ಲೆಯಲ್ಲಿ ಬಂದ್

Published On : 14 Jun 2017   |  Reported By : Canaranews Network


ಮಂಗಳೂರು: ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆ ವಿರೋಧಿಸಿ ಜೂ. 16ರಂದು ರಾಜ್ಯಾದ್ಯಂತ ಪೆಟ್ರೋಲ್ ಬಂಕ್ಗಳು ಬಂದ್ ಆಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜೂ. 15ರ ಮಧ್ಯರಾತ್ರಿ 12 ಗಂಟೆಯಿಂದ ಜೂ. 16ರ ಮಧ್ಯರಾತ್ರಿ 12ರ ವರೆಗೆ ಬಂದ್ ಆಗಲಿವೆ.

ಉಭಯ ಜಿಲ್ಲೆಗಳಲ್ಲಿ ಸುಮಾರು 200 ಪೆಟ್ರೋಲ್ ಬಂಕ್ಗಳಿದ್ದು, ದಿನವೊಂದಕ್ಕೆ ಸರಾಸರಿ ಪ್ರತಿ ಬಂಕ್ಗಳಲ್ಲೂ 5,000ದಿಂದ 6,000 ಲೀಟರ್ ಪೆಟ್ರೋಲ್/ ಡೀಸೆಲ್ ಮಾರಾಟವಾಗುತ್ತದೆ. ಅಂದರೆ ಸರಿಸುಮಾರು 10 ಕೋ.ರೂ.ಗಳ ವ್ಯವಹಾರ ನಡೆಯುತ್ತದೆ.

ಕರಾವಳಿ ಜಿಲ್ಲೆಯಲ್ಲಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ಬಂದ್ ಆಗಲಿದೆ.ಕೆಲವೊಂದು ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳಿಗೆ ಗ್ಯಾಸ್ ತುಂಬಿಸುವ ವ್ಯವಸ್ಥೆಯೂ ಇದ್ದು, ಅದು ಕೂಡ ಬಂದ್ ಆಗಲಿದೆ.ಜೂ. 16ರಂದು ಇಂಧನ ಅಲಭ್ಯವಾಗುವ ಹಿನ್ನೆಲೆಯಲ್ಲಿ ಜೂ. 15 ಹಾಗೂ ಜೂ. 17ರಂದು ಬಂಕ್ಗಳಲ್ಲಿ ದಟ್ಟಣೆ ಆಗುವ ಸಾಧ್ಯತೆ ಇದೆ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here