Thursday 22nd, March 2018
canara news

ಕಡಲ್ಕೊರೆತ ತಡೆಗೆ ಕ್ರಮ: ಖಾದರ್ ಪುನರುಚ್ಚಾರ

Published On : 14 Jun 2017   |  Reported By : Canaranews Network


ಮಂಗಳೂರು: ಕಡಲ್ಕೊರೆತದಿಂದ ಅಪಾಯದಲ್ಲಿರುವ ಉಳ್ಳಾಲ ವ್ಯಾಪ್ತಿಯ ಕೈಕೋ, ಕಿಲೇರಿಯಾನಗರ, ಸೋಮೇಶ್ವರ ಉಚ್ಚಿಲದಲ್ಲಿ ತಾತ್ಕಾಲಿಕ ಕಲ್ಲು ಹಾಕುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಈ ಪ್ರದೇಶದಲ್ಲಿ ಬಂದರು ಇಲಾಖೆಯ ಎಂಜಿನಿಯರ್ಗಳು ಪ್ರತೀದಿನ ಸರ್ವೇಕ್ಷಣೆ ನಡೆಸಲಿದ್ದು, ಕಡಲ್ಕೊರೆತವಾದರೆ ತುರ್ತುಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.ಅವರು ಕಡಲ್ಕೊರೆತದಿಂದ ಹಾನಿಯಾಗಿರುವ ಕೈಕೋ, ಕಿಲೇರಿಯಾ ನಗರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, ಈಗಾಗಲೇ ಕೈಕೋದಲ್ಲಿ ಮನೆಯೊಂದಕ್ಕೆ ಹಾನಿಯಾಗಿದ್ದು, ಪ್ರಕೃತಿ ವಿಕೋಪದಡಿ ಸಿಗುವ ಧನಸಹಾಯ ನೀಡಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭ ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಸದಸ್ಯರಾದ ಮಹಮ್ಮದ್ ಮುಸ್ತಾಫ, ಹನೀಫ್ ಕೋಟೆಪುರ ಉಪಸ್ಥಿತರಿದ್ದರು.
More News

ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು
ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು
ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ
ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ
ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷರಾಗಿ ರಾಜ್‍ಕುಮಾರ್ ಕಾರ್ನಾಡ್ ಪುನಾರಾಯ್ಕೆ
ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷರಾಗಿ ರಾಜ್‍ಕುಮಾರ್ ಕಾರ್ನಾಡ್ ಪುನಾರಾಯ್ಕೆ

Comment Here