Friday 9th, May 2025
canara news

ಅತಂತ್ರ ಸ್ಥಿತಿಯಲ್ಲಿ ಬಾರ್ಜ್;10 ದಿನವಾದರೂ ತೆರವಾಗಿಲ್ಲ

Published On : 14 Jun 2017   |  Reported By : Canaranews Network


ಮಂಗಳೂರು: ಮಂಗಳೂರು ಹೊರವಲಯದ ಮೊಗವೀರಪಟ್ಣದ ಸಮುದ್ರದಲ್ಲಿ ಕಡಲ್ಕೊರೆತ ಶಾಶ್ವತ ಕಾಮಗಾರಿ ನಡೆಸಲು ತರಲಾಗಿದ್ದ ಬಾರ್ಜ್ ಅವಘಡಕ್ಕೀಡಾಗಿ ಮುಳುಗಡೆ ಸ್ಥಿತಿಯಲ್ಲಿದ್ದು ದಿನ 10 ಕಳೆದರೂ ಬಾರ್ಜ್ನ ತೆರವು ಸೇರಿದಂತೆ, ತೈಲ ತೆರವಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಈ ನಡುವೆ ಬೃಹತ್ ಅಲೆಗಳಿಗೆ ಸಿಲುಕಿ ಬಾರ್ಜ್ನೊಂದಿಗೆ ತೈಲವೂ ಸಮುದ್ರ ಪಾಲಾಗುವ ಭೀತಿಯಲ್ಲಿದೆ.ಮೊಗವೀರಪಟ್ಣದ ಸಮುದ್ರದ ದಡದಿಂದ ಸುಮಾರು 700 ಮೀಟರ್ ದೂರದ ಸಮುದ್ರದಲ್ಲಿ ರೀಫ್ ಕಾಮಗಾರಿ ನಡೆಸಿದ ಬಳಿಕ ಬಾರ್ಜ್ ಬೇರೆ ಕಡೆ ಸ್ಥಳಾಂತರಿಸುತ್ತಿದ್ದಾಗ ಅವಘಡಕ್ಕೀಡಾಗಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ತಡೆದಂಡೆಗೆ ಬಡಿದು ಮುಕ್ಕಾಲಂಶ ಮುಳುಗಿ ನಿಂತಿದೆ.

ಕಳೆದ 6 ದಿನಗಳಲ್ಲಿ ಹಂತ ಹಂತವಾಗಿ ಮುಳುಗುತ್ತಿದ್ದ ಬಾರ್ಜ್ ನಾಲ್ಕು ದಿನಗಳಿಂದ ಮುಳುಗದಿದ್ದರೂ ಬಾರ್ಜ್ನ ಕ್ಯಾಬಿನ್ಗಳು, ಕ್ರೈನ್ ಸಹಿತ ಬೆಲೆಬಾಳುವ ವಸ್ತುಗಳು ಸಮುದ್ರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗುತ್ತಿವೆ. ಬಾರ್ಜ್ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಕಳೆದ ಎರಡು ದಿನಗಳ ಹಿಂದಿನವರೆಗೆ ಬಾರ್ಜ್ ಮತ್ತು ಅದರೊಳಗಿರುವ ತೈಲವನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿತ್ತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here