Thursday 28th, March 2024
canara news

ಕುಂದಾಪುರ ವಲಯದ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ - ಪ್ರಮೀಳಾ ಡೇಸಾ

Published On : 15 Jun 2017   |  Reported By : Bernard J Costa


ಕುಂದಾಪುರ, ಜೂ. 15 ಕುಂದಾಪುರ ವಲಯ ಮಟ್ಟದ ಸ್ತ್ರೀ ಸಂಘಟನೇಯ 2017-18 ರ ಅವಧಿಯ ಅಧ್ಯಕ್ಷೆಯಾಗಿ ಪಿಯುಸ್ ನಗರದ ಪ್ರಮೀಳ ಡೇಸಾ ಇವರು ಆಯ್ಕೆಯಾಗಿದ್ದಾರೆ.

ಹಾಗೆ ಕಾರ್ಯದರ್ಶಿಯಾಗಿ ಪೆÇ್ಲಸ್ಸಿ ಬ್ರಗಾಂಜಾ ಗಂಗೊಳ್ಳಿ, ಕೋಶಾಧಿಕಾರಿಯಾಗಿ ಶಾಂತಿ ಕರ್ವಾಲ್ಲೊ ಕುಂದಾಪುರ, ಸಂಘಟನೇಯ ‘ಮೊತಿಯಾ’ ಪತ್ರದ ಪ್ರತಿನಿಧಿಯಾಗಿ ಜೊಸ್ಪಿನ್ ರೇಬೆರೊ ಬೈಂದೂರು, ಉಪಾಧ್ಯಕ್ಷೆಯಾಗಿ ಹಿಲ್ಡಾ ಮೆಂಡೊನ್ಸಾ ತಲ್ಲೂರು, ಸಹ ಕಾರ್ಯದರ್ಶಿಯಾಗಿ ಪೆÇ್ಲಸ್ಸಿ ಒಲೀವೆರಾ ಪಡುಕೋಣೆ, ಹಾಗೂ ಕೇಂದ್ರದ ಪ್ರತಿನಿಧಿಯಾಗಿ ವಿನಯಾ ಡಿಕೋಸ್ತಾ ಕುಂದಾಪುರ ಮತ್ತು ಲೀನಾ ತಾವ್ರೊ ಪಿಯುಸ್ ನಗರ ಇವರುಗಳು ನೂತನ ಕಾರ್ಯ ಮಂಡಳಿಯಲ್ಲಿ ಚುನಾಯಿತರಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯನ್ನು ಕೇಂದ್ರದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಫಾ|ರೆಜಿನಾಲ್ಡ್ ಪಿಂಟೊ ನೆಡೆಸಿಕೊಟ್ಟರು. ಕುಂದಾಪುರ ವಲಯದ ಸಂಘಟನೇಯ ಸಚೇತಕಿ ಸಿಸ್ಟರ್ ಜೂಲಿಯಾ ಅವರು ಪಧಾಧಿಕಾರಿಗಳ ಹುದ್ದೆಯ ಹಸ್ತಾಂತರ ಪ್ರಕ್ರಿಯೆಯನ್ನು ನೆಡಿಸಿಕೊಟ್ಟರು. ಸ್ವ ಸಹಾಯ ಪಂಗಡಗಳ ಕುಂದಾಪುರ ವಲಯದ ಸಂಚಾಲಕಿ ಪ್ರೀತಿ ಫೆರ್ನಾಂಡಿಸ್ , ಕೇಂದ್ರದ ಅಧ್ಯಕ್ಷೆ ಐರೀನ್ ಪಿರೇರಾ, ಕಾರ್ಯದರ್ಶಿ ಸಿಂತಿಯಾ ಡಿಸೋಜಾ, ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜೆನ್ನಿ ಡೇಸಾ ವರದಿ ವಾಚಿಸಿದರು. ಪ್ರಮೀಳಾ ಡೇಸಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here