Sunday 25th, June 2017
canara news

ಕುಂದಾಪುರ ಸಂತ ಮೇರಿಸ್ ಪ್ರೌಡಶಾಲೆ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ

Published On : 15 Jun 2017   |  Reported By : Bernard J Costa


ಕುಂದಾಪುರ, ಜೂ,15: ‘ಕುಂದಾಪುರ ಸಂತ ಮೇರಿಸ್ ಪ್ರೌಡಶಾಲೆ 50 ವರ್ಷಗಳನ್ನು ಪೂರೈಸಿ ಇದೀಗ ಸುವರ್ಣ ಮಹೋತ್ಸವದ ಸಂಬ್ರಮದಲ್ಲಿದೆ. ಕುಂದಾಪುರ ವಲಯದ ಪ್ರಧಾನ ಧರ್ಮಗುರು, ಶಾಲೆಯ ಸಂಚಾಲಕ ವಂ|ಅನಿಲ್ ಡಿಸೋಜಾ, ಸುವರ್ಣ ಮಹೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ ಸಂದೇಶ ನೀಡಿದರು.

‘ಈ ಶಾಲೆಯಲ್ಲಿ ಕಲಿತ ಸಾವಿರಾರು ಮಂದಿ ಇವತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಹಾಗೇ ಇನ್ನಿತರರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜದಲ್ಲಿ ಗೌರವ ಸ್ಥಾನದಿಂದ ಬಾಳುತಿದ್ದಾರೆ, ಇವರೆಲ್ಲರನ್ನು ಸಂಘಟಿಸಿ, ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸರ್ವರ ಸಹಾಯದಿಂದ ಮಾದರಿ ಕಾರ್ಯಕ್ರಮಗಳನ್ನು ಆಚರಿಸಿ ಸಂತ ಮೇರಿಸ್ ಪ್ರೌಡಶಾಲೆಯನ್ನು ಇನ್ನಸ್ಟು ಕೀರ್ತಿ ಶಿಖರಕ್ಕೆ ಒಯ್ಯುವಂತೆ ಮಾಡಲು ಶಾಲ ಮಂಡಳಿ ಪ್ರಯತ್ನ ಪಡುತ್ತಿದೆ. ಹಾಗಾಗಿ ಇಲ್ಲಿ ಕಲಿತಂತ ಎಲ್ಲಾ ವಿಧ್ಯಾರ್ಥಿಗಳು ಕೈ ಜೋಡಿಸಿ ಶಕ್ತಿ ಮೀರಿ ಶ್ರಮಿಸ ಬೇಕು ಎಂದು’ಕುಂದಾಪುರ ವಲಯದ ಪ್ರಧಾನ ಧರ್ಮಗುರು, ಶಾಲೆಯ ಸಂಚಾಲಕ ವಂ|ಅನಿಲ್ ಡಿಸೋಜಾ, ಸುವರ್ಣ ಮಹೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ ಸಂದೇಶ ನೀಡಿದರು.

‘ಸುವರ್ಣ ಮಹೋತ್ಸವದ ಸುಂದರ ಲಾಂಛನವನ್ನು ಮುಂದೆ ಇಟ್ಟುಕೊಂಡು ಮುಂದೆ ವರ್ಷವೀಡಿ ನೆಡೇಯುವ ಕಾರ್ಯಕ್ರಮಗಳನ್ನು ನೆಡಸಲಾಗುವುದು. ಈ ಮೂಲಕ ಸಂತ ಮೇರಿಸ್ ಪ್ರೌಡಶಾಲೆ ಚಿನ್ನದ ಹೆಜ್ಜೆಗಳನ್ನು ಮೂಡಿಸಲಾಗುವುದು’ ಅವರು ತಿಳಿಸಿದರು.

ಈ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಎಲ್.ಜೆ.ಫೆರ್ನಾಂಡಿಸ್, ಪುರಸಭೆ ಉಪಾಧ್ಯಕ್ಷ, ಹಳೆ ವಿಧ್ಯಾರ್ಥಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕುಂದಾಪುರ ಸಂತ ಮೇರಿಸ್ ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾನಿ ಡೊರತಿ ಸುವಾರಿಸ್, ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ, ಮುಖ್ಯೋಪಾಧ್ಯಾನಿ ಸಿಸ್ಟರ್ ಜೋಯ್ಸ್‍ಲಿನ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾನಿ ಸಿಸ್ಟರ್ ಚೇತನಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಸ್ಟ್ಯಾನಿ ದಿನಮಣಿ ಪ್ರಾಸ್ತಾವಿಕ ಲಾಂಛನದ ಬಗ್ಗೆ ವಿವರಿಸಿದರು. ಶಿಕ್ಷಕಿ ಪ್ರೀತಿ ಪಾಯಸ್ ವಂದಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
More News

ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ
ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ
ಎಸ್ಪಿ ಅಣ್ಣಾಮಲೈ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಭದ್ರತೆ
ಎಸ್ಪಿ ಅಣ್ಣಾಮಲೈ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಭದ್ರತೆ
ಸಹಕಾರಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ
ಸಹಕಾರಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ

Comment Here