Saturday 10th, May 2025
canara news

ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ' ವತಿಯಿಂದ ನಾಲ್ಕು ಕೃತಿಗಳ ಬಿಡುಗಡೆ

Published On : 19 Jun 2017   |  Reported By : Rons Bantwal


ಕನಸುಗಳ ಮಾರಾಟದ ನಗರಿ ಮುಂಬಯಿ:ಪ್ರೇಮ್ ಶೇಖರ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.18: ಮುಂಬಯಿ ಕನಸುಗಳ ಮಾರಾಟದ ನಗರಿ. ಎಲ್ಲಾ ಕಾರಣಗಳಿಗಾಗಿ ಬೆಂಗಳೂರಿಗಿಂತ ಮುಂಬಯಿಯೇ ಕರ್ನಾಟಕ ಜನರಿಗೆ ಇಷ್ಟವಾಗಿತ್ತು. ಜಾಗತೀಕರಣವನ್ನು ಅನುಮಾನದ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ನಮ್ಮ ಸಂಸ್ಕೃತಿ ಪ್ರತಿಭೆ ಮೊದಲಾದವುದರ ಬಗ್ಗೆ ನಮಗೆ ಕೀಳರಿಮೆ ಬೇಡ. ನಮ್ಮ ನಡುವೆ ಇರುವ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ವ್ಯಕ್ತಿಗಳ ಪರಿಚಯ ನಮಗಿಲ್ಲದಿರುವುದು ವಿಷಾದನೀಯ ಎಂದು ಹೆಸರಾಂತ ವಿಮರ್ಶಕ, ಕತೆಗಾರ ಪ್ರೇಮ್ ಶೇಖರ್ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಂಗಣದಲ್ಲಿ ಮಹಾನಗರದಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ' ಆಯೋಜಿಸಿದ್ದ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಕೃತಿಗಳನ್ನು ಬಿಡುಗಡೆ ಗೊಳಿಸಿ ಶೇಖರ್ ಪ್ರೇಮ್ ಶೇಖರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಪ್ರಸಿದ್ಧ ವಿದ್ವಾಂಸ ಡಾ| ತಾಳ್ತಜೆ ವಸಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರೇಮ್ ಶೇಖರ್ ಉಪಸ್ಥಿತರಿದ್ದು ಡಾ| ತಾಳ್ತಜೆ ಅವರೂ ಡಾ| ಗಿರಿಜಾ ಶಾಸ್ತ್ರೀ ಅವರ ಮೂರು ಕೃತಿಗಳಾದ `ತಾಯಮುಖ ಕಾಣದಲ್ಲಾ', `ಸೆರಗ ಬಿಡೊ ಮರುಳೇ' ಮತ್ತು `ಸಂಜೀವನ' ಹಾಗೂ ದಾಕ್ಷಾಯಿಣಿ ಯಡಹಳ್ಳಿ ಅವರ ಎರಡು ಕೃತಿಗಳಾದ `ಮೀರಾಬಾಯಿಯ ಭಜನೆಗಳು' ಕೃತಿಗಳೊಂದಿಗೆ ಒಟ್ಟು ನಾಲ್ಕು ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿ ಸಾರಸ್ವತ ಲೋಕಕ್ಕೆ ಅರ್ಪಿಸಿದರು. ಕವಿ ನಾಟಕಕಾರ ಸಾ.ದಯಾ, ಲೇಖಕಿ ಲಲಿತಾ ಪಿ.ಅಂಗಡಿ, ಲೇಖಕಿ ಶಾರದಾ ಅಂಬೆಸಂಗೆ ಕ್ರಮವಾಗಿ ಕೃತಿಗಳ ಸಮೀಕ್ಷೆಗೈದರು.

ಡಾ| ತಾಳ್ತಜೆ ಅಧ್ಯಕ್ಷೀಯ ನುಡಿಗಳನ್ನಾಡಿ ತಮ್ಮ ಹಿರಿಯರ ಯಾ ಕಿರಿಯರ ಬಗ್ಗೆ ಎಲ್ಲಿ ಪ್ರೀತಿ ಇದೆಯೋ ಅಲ್ಲಿ ನಮಗೆ ಅಂತಕರಣ ತಟ್ಟುತ್ತದೆ. ಅಂತ ಅಂತಕರಣ ತಟ್ಟುವ ಅತ್ಮೀಯ ಸೃಜನದ ಸಹೋದರಿಯರು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವಂತದ್ದು, ಅಂತಕರಣ ತಟ್ಟುವಂತದ್ದು. ಇಂದು ಇಲ್ಲಿ ಬಿಡುಗಡೆಗೊಂಡು ಡಾ| ಶಾಸ್ತ್ರಿ ಅವರ 3 ಕೃತಿಗಳು ತುಂಬ ಅಪ್ತವಾಗಿ ತಟ್ಟುತ್ತದೆ. ಅವರ ಅಧ್ಯಯಶೀಲತೆ ಅಪಾರವಾದ ಓದು ಶ್ರಮ ಈ ಕೃತಿಗಳಲ್ಲಿ ನಾವೂ ಕಾಣಬಹುದು ಎಂದು ಡಾ| ಗಿರಿಜಾ ಅವರನ್ನು ಅಭಿನಂದಿಸಿದರು. ಮೀರ ಕೃಷ್ಣರ ಸಂಬಂಧ ಲೌಕಿಕ ಸಂಬಂಧದಿಂದ ಆಚೆಗಿನಯ. ಮೀರಾಳ ಗಂಡ, ಅಕ್ಕನ ಗಂಡ ಕೌಶಿಕ ಅವರ ದೃಷ್ಟಿಯಿಂದಲೂ ಯೋಚಿಸುವ ಕೃತಿಗಳು ಸೃಜನದವರಿಂದಲೇ ಬರಲೆಂದು ಆಶಿಸಿದರು. ಡಾ| ದಾಕ್ಷಯಣಿ ಅವರನ್ನು ಈ ಕೃತಿಗಾಗಿ ಅಭಿನಂದಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗ ಹಾಗೂ ಸೃಜನಾ'ದ ಪ್ರಧಾನ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ ಮೇಲ್ವಿಚಾರಣೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಕೃತಿಕರ್ತೆಯರಾದ ಡಾ| ಗಿರಿಜಾ ಶಾಸ್ತ್ರೀ ತನ್ನ ಹಾಗೂ ಕೃತಿಕರ್ತೆ ದಾಕ್ಷಾಯಿಣಿ ಯಡಹಳ್ಳಿ ತಮ್ಮತಮ್ಮ ಕೃತಿಗಳ ಬಗ್ಗೆ ಅನುಭವ ಹಂಚಿಕೊಂಡರು.

ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಸೃಜನಾ'ದ ಸಹ ಸಂಚಾಲಕಿ ವಿೂನಾ ಕಳವಾರ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುಧಾ ಶೆಟ್ಟಿ ಮತ್ತು ಅನಿತಾ ಪಿ.ಪೂಜಾರಿ ತಾಕೋಡೆ ಕೃತಿಗಳ ಸಮೀಕ್ಷಕರನ್ನು ಪರಿಚಯಿಸಿದÀರು. ಲೇಖಕಿ ಹೇಮಾ ಸದಾನಂದ್ ಅವಿೂನ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ವಾಣಿ ಶೆಟ್ಟಿ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here