Saturday 10th, May 2025
canara news

ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ-2017ಕ್ಕೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ವಿಠ್ಠಲ ಡಿ.ಶೆಟ್ಟಿ ಆಯ್ಕೆ

Published On : 20 Jun 2017   |  Reported By : Rons Bantwal


ಮುಂಬಯಿ, ಜೂ.19: ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಪ್ರಖ್ಯಾತ ಭಾಗವತ, ಯಕ್ಷಗಾನ ಕಲಾ ಪೆÇೀೀಷಕ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಮತ್ತು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ವಿಜಯಾ ಬ್ಯಾಂಕ್‍ನ ನಿವೃತ್ತ ಹಿರಿಯ ಪ್ರಬಂಧಕ ವಿಠ್ಠಲ ಡಿ.ಶೆಟ್ಟಿ ಇವರು ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ-2017 ಗೌರವಕ್ಕೆ ಆಯ್ಕೆಯಾಗಿದ್ದಾರೆ.

2010ರಿಂದ ಮುಲ್ಕಿ ಸುಂದರರಾಮ ಶೆಟ್ಟಿ ಸ್ಮರಣಾರ್ಥ ನಡೆಯುವ ಸಾಮಾಜಿಕ, ಧಾರ್ಮಿಕ,ಸಾಂಸ್ಕøತಿಕ ಸರಣಿ ಕಾರ್ಯಕ್ರಮವನ್ನು ಸಂಘಟನೆ ಆಯೋಜಿಸುತ್ತಾ ಬಂದಿದ್ದು, ದೇಶ-ವಿದೇಶದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ.29ರ ಶನಿವಾರ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಅಂದೇ ಮಂಗಳೂರು ಮಹಾನಗರ ಪಾಲಿಕೆಯ ಲೈಟ್‍ಹೌಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣ ಹಾಗೂ ಸಮಾರಂಭ ನಡೆಸಲಾಗುವುದು.

2016ರ ಪ್ರಶಸ್ತಿಗೆ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಕದ್ರಿ ನವನೀತ ಶೆಟ್ಟಿ ಮಂಗಳೂರು ಆಯ್ಕೆ ಆಗಿದ್ದರು ಎಂದು ವಿಜಯಬ್ಯಾಂಕ್ ವರ್ಕರ್ಸ್ ಆರ್ಗನೈಜೇಸನ್ ಮತ್ತು ವಿಜಯಬ್ಯಾಂಕ್ ಆಫೀಸರ್ಸ್ ಯೂನಿಯನ್ ಪದಾಧಿಕಾರಿಗಳು ಮತ್ತು ಸಮಾಜ ಸೇವಕ ಹಾಗೂ ವಿಜಯಾ ಬ್ಯಾಂಕ್‍ನ ನಿವೃತ್ತ ಹಿರಿಯ ಪ್ರಬಂಧಕ ವಿಠ್ಠಲ ಡಿ.ಶೆಟ್ಟಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here