Saturday 27th, April 2024
canara news

ಗಿಳಿಯಾರು ಕುಶಲ ಹೆಗ್ಡೆ, ಸ್ಮಾರಕ ದತ್ತಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Published On : 21 Jun 2017   |  Reported By : Bernard J Costa


ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವುದೇ ಮುಖ್ಯ ಡಾ| ರವೀಂದ್ರನಾಥ್ ಶ್ಯಾನುಭಾಗ್

Rank ಪಡೆದವರಿಗೆ ಸನ್ಮಾನ ನಡೆಯುತ್ತದೆ. ಉತ್ತಮ ಅಂಕಗಳಿಸಿದವರಿಗೆ ಸಹಾಯಧನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಸೇವೆ ನಡೆಯುತ್ತಿದೆ. ಆದರೆ ಈ ವಿದ್ಯಾರ್ಥಿಗಳು ಯಾವುದೋ ಕೆಲಸ ಅಥವಾ ಉನ್ನತ ಹುದ್ದೆ ಪಡೆದು ಸಮಾಜವನ್ನೇ ಮರೆತು ಬಿಟ್ಟರೆ ಏನು ಪ್ರಯೋಜನ?. ನಮ್ಮ ದೇಶದ ಜನರ ಸರಕಾರದ ನೆರವಿನ ಸಹಾಯದಿಂದ ಇಂದು ವಿದೇಶಕ್ಕೆ ಹೋಗಿ ಕೆಲಸ ಪಡೆದವರಿಗೆ ಕಿಂಚಿತ್ತ್ತೂ ನಮ್ಮ ದೇಶ, ಊರಿನ ಕಾಳಜಿ ಇಲ್ಲ. ಎಷ್ಟೋ ಮಂದಿ ತಮ್ಮ ಹೆತ್ತವರನ್ನೂ ನೋಡುತ್ತಿಲ್ಲ. ಹಲವರಂತೂ ಹೆತ್ತವರಿಗೆ ತಿಳಿಯದೇ ಅವರ ಆಸ್ತಿ, ಲಪಟಾಯಿಸಿದ್ದಾರೆ. ಇಂತಹ ವಿದ್ಯಾವಂತರಿಂದ ಏನು ಪ್ರಯೋಜನ? ವಿದ್ಯಾವಂತರಾಗಿ ಬದುಕಿನಲ್ಲಿ ಶಕ್ತಿ ಬಂದ ಮೇಲೆ ಸಮಾಜದ ಅಭಿವೃದ್ಧಿಗೆ ಸ್ಪಂದಿಸಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಹಾಗಾದರೆ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ" ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ (ರಿ)ದ ಸಂಚಾಲಕ ಡಾ| ರವೀಂದ್ರನಾಥ ಶ್ಯಾನುಭಾಗ್ ಹೇಳಿದರು.

ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕುಂದಾಪುರ ತಾಲ್ಲೂಕಿನ ಸುಮಾರು 400 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನ ವಿತರಣಾ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ, ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಹಿರಿಯ ಕೈಗಾರಿಕೋದ್ಯಮಿ ಸೋಲಮನ್ ಸೋನ್ಸ್ ವಹಿಸಿದ್ದರು.

ಮಾನವ ಹಕ್ಕು , ಕರ್ತವ್ಯದ ವಿಷಯದಲ್ಲಿ ಬಹುತೇಕ ಮಂದಿಗೆ ಪರಿಜ್ಞಾನವೇ ಇಲ್ಲ. ಸರಕಾರದ ಎಷ್ಟೋ ಕಾನೂನು ನಿಯಮಗಳ ಬಗ್ಗೆ ಅಧಿಕಾರಿಗಳಿಗೇ ಗೊತ್ತಿರುವುದಿಲ್ಲ. ಹಾಗಿರುವಾಗ ಸಮಾಜದಲ್ಲಿರುವ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಸಿಗುವುದಾದರೂ ಹೇಗೆ ಎಂದು ಹಲವಾರು ಘಟನೆಗಳನ್ನು ಉದಾಹರಿಸಿ ಮಾತನಾಡಿದ ಡಾ| ರವೀಂದ್ರನಾಥ ಶ್ಯಾನುಭಾಗ್, ವಿದ್ಯಾರ್ಥಿಗಳು, ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಕೇವಲ ಅಂಕಗಳು ಮಾತ್ರ ಸಾಕಾಗುವುದಿಲ್ಲ. ನೈತಿಕ ಮೌಲ್ಯ , ಸಾಮಾಜಿಕ ಜ್ಞಾನ ಬೆಳೆಸಿಕೊಳ್ಳುವುದು ಬಹಳ ಮುಖ್ಯ . ಮುಂದೆ ಕೌಟುಂಬಿಕ ಸಂಬಂಧವನ್ನು ಮರೆಯುವ, ಸ್ಫೂರ್ತಿ ತುಂಬಿದ ಸಮಾಜವನ್ನು, ಊರು, ದೇಶವನ್ನೇ ಮರೆಯುವ ಗುಣ ಯಾರೂ ಬೆಳೆಸಿಕೊಳ್ಳಬಾರದು" ಎಂದರು.

ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನವರನ್ನು ಕೊಂಡಾಡಿದ ಅವರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ಇಂತಹ ಸಂಸ್ಥೆ, ವ್ಯಕ್ತಿಗಳು ನಮಗೆ ಅಗತ್ಯವಾಗಿದೆ" ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ್" ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಹಲವು ಶಿಸ್ತು, ನಿಯಮಗಳನ್ನು ಪಾಲಿಸಿಕೊಂಡು ಬರಬೇಕು. ಇದರಿಂದ ಪಾಠ ಹಾಗೂ ಪಾಠೇತರ ಚಟುವಟಿಕೆಗಳಲ್ಲೂ ಯಶಸ್ಸು ಪಡೆದು ಮುನ್ನಡೆಯಲು ಸಾಧ್ಯವಾಗುತ್ತದೆ. ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ಸಂಸ್ಥೆಯವರು ಕಳೆದ ಒಂದುವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿದ ಸ್ಫೂರ್ತಿ ಪ್ರಶಂಸನೀಯವಾದುದು" ಎಂದರು.

ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಕು.ರಾಧಿಕಾ ಪೈ ಗಂಗೊಳ್ಳಿ ., ಎಸ್.ಎಸ್.ಎಲ್.ಸಿ. ಯಲ್ಲಿ 4ನೇ ರ್ಯಾಂಕ್ ಪಡೆದ ಮಂಜೇಶ್ ಬೈಂದೂರು, ರಂಜಿತಾ ಆಚಾರ್ಯ ಉಪ್ಪುಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಕಾಂತ್, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುದೀಪ್ ಹಾಗೂ ಬೋರ್ಡ್ ಹೈಸ್ಕೂಲ್‍ನ ವಿದ್ಯಾರ್ಥಿಗಳಾಗಿದ್ದು ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನಗಳಿಸಿದ ತೇಜಸ್ವಿ ಭಾಸ್ಕರ್ ನಾಯ್ಕ, ಶ್ವೇತಾ ಇವರನ್ನು ಗೌರವಿಸಲಾಯಿತು.

ಕುಂದಾಪುರ ಸರಕಾರಿ ಪ್ರೌಢಶಾಲೆ ಹಕ್ಲಾಡಿ, ತಲ್ಲೂರು ಕೋಟೆಬಾಗಿಲು ಸರಕಾರಿ ಹಿ.ಪ್ರಾ.ಶಾಲೆ, ಹಂದಕುಂದ ಸರಕಾರಿ ಹಿರಿಯ ಪ್ರಾ.ಶಾಲೆಗಳ ಗ್ರಂಥಾಲಯಗಳಿಗೆ ಸಾಹಿತ್ಯ ಕೃತಿಗಳನ್ನು ನೀಡಲಾಯಿತು. ಕ್ರಮವಾಗಿ ಮುಖ್ಯೋಪಾಧ್ಯಾಯರಾದ ಕಿಶೋರ್ ಕುಮಾರ್ ಶೆಟ್ಟಿ, ವಿಠಲ ಕಾಮತ್, ಉದಯ ಭಂಡಾರ್‍ಕಾರ್ ಪುಸ್ತಕಗಳನ್ನು ಸ್ವೀಕರಿಸಿದರು.

ದ್ವಿತೀಯ ಪಿಯುಸಿ, ಪದವಿ ಕಾಲೇಜು ಹಾಗೂ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ 4 ಲಕ್ಷ ರೂ ಸಹಾಯಧನ ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಯು.ಎಸ್.ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಗಿಳಿಯಾರು ಕುಶಲ ಹೆಗ್ಡೆಯವರ ಪುತ್ರರಾದ ಉದಯ ಹೆಗ್ಡೆ, ಕಿಶೋರ್ ಹೆಗ್ಡೆ , ಸ್ವರೂಪ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು.

ಟ್ರಸ್ಟ್‍ನ ನಿರ್ದೇಶಕರಾದ ಹಿರಿಯ ವಕೀಲ ಜಿ.ಸಂತೋಷ್ ಕುಮಾರ್ ಶೆಟ್ಟಿ, ಬಿ.ವಾದಿರಾಜ್ ಬಿಳಿಯ, ನಿವೃತ್ತ ವಿಜಯಾಬ್ಯಾಂಕ್ ಪ್ರಬಂಧಕ ಕೆ.ನಾರಾಯಣ್, ಕಲಾವಿದ ಕೆ.ಕೆ.ರಾಮನ್, ರಾಷ್ಟಪ್ರಶಸ್ತಿ ಪುರಸ್ಕøತ ಶಿಕ್ಷಕ, ಹಂದಕುಂದ ಸೋಮಶೇಖರ ಶೆಟ್ಟಿ ಸಹಾಯಧನ ಪಡೆಯುವ ವಿದ್ಯಾರ್ಥಿಗಳ ವಿವರ ನೀಡಿದರು.

ಉಪನ್ಯಾಸಕ ವಿಶ್ವನಾಥ ಕರಬ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು, ಕೊಳಲು ವಾದಕ ಕೆ.ರಮಾನಂದ ರಾವ್ ಅವರಿಂದ ಕೊಳಲು ವಾದನ ನಡೆಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here