Friday 29th, August 2025
canara news

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Published On : 22 Jun 2017   |  Reported By : Bernard J Costa


ಕುಂದಾಪುರ: ಇಂದಿನ ಯಾಂತ್ರೀಕೃತ ಯುಗದಲ್ಲಿ ಯೋಗ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡಾಗ ಏಕಾಗ್ರತೆಯ ಕಡೆಗೆ ಗಮನ ಕೊಡುವುದರ ಜತೆಗೆ ಜೀವನದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿ ಬಾಳಲು ಸಾಧ್ಯ ಎಂದು ಜೇಸಿಐ ಕುಂದಾಪುರ ಚರಿಷ್ಮಾದ ಅಧ್ಯಕ್ಷೆ ಗೀತಾಂಜಲಿ ಆರ್.ನಾಯಕ್ ಹೇಳಿದರು.

ಅವರು ಬುಧವಾರ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶಾಲೆಯ 21 ಕರ್ನಾಟಕ ಬೆಟಲಿಯನ್ ಎನ್‍ಸಿಸಿ ದಳದ ಆಶ್ರಯದಲ್ಲಿ ಕುಂದಾಪುರದ ಜೇಸಿಐ ಚರಿಷ್ಮಾ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಆರ್ ನಾಯಕ್, 21 ಕರ್ನಾಟಕ ಬೆಟಲಿಯನ್ ಉಡುಪಿಯ ಬೆಟಲಿಯನ್ ಹವಲ್ದಾರ್ ಬಾಬು, ಹವಲ್ದಾರ್ ಶ್ಯಾಮ್ ಆಗಮಿಸಿದ ಶುಭ ಹಾರೈಸಿದರು. ಶಾಲಾ ಎನ್‍ಸಿ ಅಧಿಕಾರಿ ಭಾಸ್ಕರ್ ಗಾಣಿಗ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಪ್ರೀತಿ ಪಾಯಸ್ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here