Saturday 10th, May 2025
canara news

ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕರ ಹತ್ಯೆ ಜಾಸ್ತಿಯಾಗುತ್ತಿದೆ

Published On : 23 Jun 2017   |  Reported By : Rons Bantwal


ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ: ಶಾಸಕ ಮೊಹಿದ್ಧೀನ್ ಬಾವಾ

ಮುಂಬಯಿ, ಜೂ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕರ ಹತ್ಯೆ ಜಾಸ್ತಿಯಾಗುತ್ತಿದೆ. ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ ಆರೋಪಿಗಳ ಪತ್ತೆ ಹಚ್ಚಿ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಲು ಸನ್ಮಾನ್ಯ ಮುಖ್ಯಮಂತಿ ಹಾಗೂ ಗೃಹ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಹಿದ್ಧೀನ್ ಬಾವಾ ತಿಳಿಸಿದ್ದಾರೆ.

ಇವತ್ತು ಬಾಡಿಗೆ ಗೊತ್ತುಪಡಿಸಿ ಕರೆದೊಯ್ದು ಅಮುಂಜೆ ನಿವಾಸಿ ಅಶ್ರಫ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಖಂಡನೀಯ. ದಿನೇ ದಿನೇ ನಮ್ಮ ಜಿಲ್ಲೆಯಲ್ಲಿ ಜಾತಿ,ಧರ್ಮ ಮತಭೇದದ ಹೆಸರಿನಲ್ಲಿ ವಿವಿಧ ಧರ್ಮದ ಅಮಾಯಕ ಯುವಕರು ದುಷ್ಕರ್ಮಿಗಳಿಂದ ಹತ್ಯೆ ಆಗುತ್ತಲೇ ಇದ್ದಾರೆ. ಇಂತಹ ಅಹಿತಕರ ಘಟನೆಗಳಿಂದ ಜಿಲ್ಲೆಯ ಶಾಂತಿ ಪ್ರಿಯ ನಾಗರಿಕರಿಗೆ ತೊಂದರೆಯಾಗಿದೆ. ಹಲವು ಸಮುದಾಯದ ಯುವಕರು ಇಂತಹ ದುಷ್ಕೃತ್ಯಗಳಿಗೆ ಬಲಿ ಆಗುತ್ತಲೇ ಇದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತರು ಎಂಬ ಭೇದ ಭಾವವಿಲ್ಲದೆ ಜಾತ್ಯತೀತವಾಗಿ ಜೀವನ ಸಾಗಿಸುತ್ತಿದ್ದ ಜಿಲ್ಲೆಗೆ ದುಷ್ಟ ಶಕ್ತಿಗಳಿಂದ ಕೆಟ್ಟ ಹೆಸರು ಬಂದಿರುವುದು ಬೇಸರದ ವಿಷಯ ಎಂದೂ ಬಾವಾ ಖೇದ ವ್ಯಕ್ತ ಪಡಿಸಿದ್ದಾರೆ.

ಇವತ್ತು ಅಮಾಯಕ ಯುವಕ ಅಶ್ರಫ್ ಎಂಬಾತನನ್ನು ಬಾಡಿಗೆಯ ನೆಪವೊಡ್ಡಿ ಹತ್ಯೆ ಮಾಡಿದ್ದು ದುರದೃಷ್ಟ . ಹಬ್ಬ ಹರಿದಿನಗಳಲ್ಲಿ ಅಮಾಯಕ ಯುವಕರ ಹತ್ಯೆ ಜಾಸ್ತಿಯಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಗಲ್ಲಿ ಮಾತನಾಡಿ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೊಳ್ಳಲು ಸೂಚಿಸಿ ನಮ್ಮ ಜಿಲ್ಲೆಗೆ ವಿಶೇಷವಾಗಿ ರ್ಯಾಪಿಡ್ ಆ್ಯಕ್ಶನ್ ಫೆÇೀರ್ಸ್ (ಆರ್‍ಎಎಫ್) ನೇಮಿಸಲು ಸೂಚಿಸಲಾಗಿದೆ.

ಈ ಪವಿತ್ರ ರಂಜಾನ್ ತಿಂಗಳಲ್ಲಿ ಯಾವುದೇ ರೀತಿಯ ತೊಂದರೆಗೆ ಯಾರು ಕೂಡ ಆಸ್ಪದ ನೀಡದೆ ನಾವೆಲ್ಲರೂ ಭಾರತೀಯರು ಶಾಂತಿ ಪ್ರಿಯರು ಎಲ್ಲರು ಶಾಂತಿ ಕಾಪಾಡ ಬೇಕೆಂದು ಪವಿತ್ರ ಉಮ್ರಾ ಯಾತ್ರೆಯಲ್ಲಿರುವ ಶಾಸಕ ಮೊಹಿದ್ಧೀನ್ ಬಾವಾ ತಮ್ಮ ಸ್ವಕ್ಷೇತ್ರದ ಜನತೆ ಹಾಗೂ ದ.ಕ ಜಿಲ್ಲಾ ಸಮಸ್ತ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here