Saturday 10th, May 2025
canara news

ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ

Published On : 25 Jun 2017   |  Reported By : Bernard J Costa


ಕುಂದಾಪುರ : ಪವಿತ್ರ ರಮ್ಝಾನ್ ಮಾಸದ ಉಪವಾಸ ಆಚರಣೆಯ ನಂತರದ ಈದುಲ್ ಫಿತರ ಹಬ್ಬವನ್ನು ಕುಂದಾಪುರದಲ್ಲಿ ಮುಸ್ಲಿಮ್ ಬಾಂಧವರು ಸಂಭ್ರಮದಿಂದ ಆಚರಿಸಿದರು. ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ ೮.೩೦ಕ್ಕೆ ಈದ್ ನಮಾಝ್ ನೆರವೇರಿಸಿದ ಧರ್ಮಗುರುಗಳಾದ ಮೌಲಾನ ಹಾಜಿ ಅಬ್ದುಲ್ ರಹೀಮ್ ಅವರು ಪವಿತ್ರ ರಮ್ಜಾನ್ ಬಗ್ಗೆ ಪ್ರವಚನ ನೀಡಿ ಇಸ್ಲಾಮ್ ತತ್ವಗಳಾದ ಶಾಂತಿ, ಸಹೋದರತೆ, ಸಹನೆಯ ಹಾದಿಯಲ್ಲಿಯೇ ಮುಂದುವರಿಯುವ ಹಾಗೂ ದೀನ ದಲಿತರ, ಬಡವರ, ಅಸಹಾಯಕರ ಹಸಿವಿನ ಸಂಕಟ, ನೋವನ್ನು ಸ್ವತ:, ನಮ್ಮ ಅನಭವಕ್ಕೆ ತರುವ ಪವಿತ್ರ ರಮ್ಜಾನ್ ಮಾಸದ ಪಾವಿತ್ಯ್ರತೆ ಮತ್ತು ದಾನ ಧರ್ಮದ ಬಗ್ಗೆ ಹೇಳಿದರು.

ನಮಾಜ್ ನಂತರ ನಗರದ ಪ್ರಮುಖ ಮಾರ್ಗದ ಮೂಲಕ ಸ್ವಲಾತ್ ಹೇಳುತ್ತಾ ಈದ್ಗಾಗೆ ಸಾಗಿದ ಮುಸ್ಲಿಮ್ ಬಾಂಧವರುಅಲ್ಲಿ ದುವಾ ನೆರವೇರಿಸಿ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯಿಸಿಕೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here