Saturday 10th, May 2025
canara news

ಉಳ್ಳಾಲದಲ್ಲಿ ತುಮಕೂರಿನ ಇಬ್ಬರು ಯುವಕರು ಸಮುದ್ರಪಾಲು

Published On : 28 Jun 2017   |  Reported By : Canaranews Network


ಮಂಗಳೂರು: ಆಟವಾಡಲೆಂದು ಸಮುದ್ದಕ್ಕಿಳಿದಿದ್ದ ತುಮಕೂರು ಮೂಲದ ಇಬ್ಬರು ಯುವಕರು ಸಮುದ್ರಪಾಲಾದ ಘಟನೆ ಮಂಗಳೂರಿನ ಉಳ್ಳಾಲದ ಮೊಗವೀರ ಪಟ್ಣ ಬೀಚಿನಲ್ಲಿ ನಡೆದಿದೆ. ಒಬ್ಬರು ಸಾವನ್ನಪ್ಪಿದ್ದು ಇನ್ನೊಬ್ಬರು ನೀರು ಪಾಲಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಗಳಾದ ಅಯಾಝ್ ಯಾನೆ ಚೋಟು(19) ಹಾಗೂ ಶಾರೂಕ್ (19) ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದವರಾಗಿದ್ದಾರೆ.ಸುಮಾರು 10 ಮಂದಿ ಸಂಬಂಧಿಕರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು.

ಬಳಿಕ ಇವರು ಮೊಗವೀರಪಟ್ನದ ಸಮುದ್ರ ಕಿನಾರೆಗೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದ ಕೆಲವರ ಪೈಕಿ ಅಯಾಝ್ ಮತ್ತು ಶಾರೂಕ್ ಬೃಹತ್ ಅಲೆಗಳ ಅಬ್ಬರಕ್ಕೆ ಸಿಲುಕಿದ್ದರು.ಇದೇ ವೇಳೆ ಸಮುದ್ರಪಾಲಾಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಸ್ಸ್ಸ್ಸ್ಸ್ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here