Saturday 10th, May 2025
canara news

ಕಂಬಳ ಮಸೂದೆ ಗ್ರೀನ್ ಸಿಗ್ನಲ್ ಖಚಿತ

Published On : 01 Jul 2017   |  Reported By : Canaranews Network


ಮಂಗಳೂರು: ಬಹು ನಿರೀಕ್ಷಿತ ಕಂಬಳ ಮಸೂದೆಗೆ ಗೃಹ ಸಚಿವಾಲಯದ ಅಂಕಿತ ದೊರಕಿದ್ದು, ಇಂದು ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ. ಈ ಮೂಲಕ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅಧಿಕೃತ ಹಸಿರು ನಿಶಾನೆ ದೊರಕುವುದು ಖಚಿತವಾಗಿದೆ.ಈ ಮಸೂದೆ ರಾಜ್ಯಕ್ಕೆ ಸಂಬಂಧಪಟ್ಟದ್ದಾಗಿದ್ದು,ರಾಜ್ಯದ ಎರಡೂ ಸದನಗಳಿಂದಲೂ ಅಂಗೀಕೃತಗೊಂಡಿದೆ. ಕಾನೂನು ಯಾರು ಮಾಡಬೇಕು ಹಾಗೂ ಕೆಲವೊಂದು ತಾಂತ್ರಿಕ ಅಂಶಗಳ ಹಿನ್ನೆಲೆಯಲ್ಲಿ ಇದನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿ ಮಸೂದೆಗೆ ಗೃಹ ಸಚಿವಾಲಯದ ಅಂಕಿತ ಬಿದ್ದಿದ್ದು, ಇದನ್ನು ರಾಷ್ಟ್ರಪತಿಗಳ ಬಳಿ ಕಳುಹಿಸುವ ಅವಶ್ಯಕತೆ ಇರುವುದಿಲ್ಲವೆಂದು ಸಚಿವಾಲಯ ಸ್ಪಷ್ಟಪಡಿಸಿದೆ. 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here