Monday 7th, July 2025
canara news

ಪೇಜಾವರ ಶ್ರೀಗಳು ಹಿಂದೂಗಳ ಕ್ಷಮೆಯಾಚಿಸಬೇಕು - ಪ್ರವೀಣ್ ವಾಲ್ಕೆ

Published On : 01 Jul 2017   |  Reported By : Canaranews Network


ಮಂಗಳೂರು: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಕಾರಣ ಮಠದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಪೇಜಾವರ ಶ್ರೀಗಳು ಹಿಂದೂ ಸಮಾಜದೆದುರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಕೆ, "ಇಫ್ತಾರ್ ಕೂಟ ಆಯೋಜನೆ ವಿರೋಧಿಸಿ ಜುಲೈ 2 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು," ಎಂದು ಹೇಳಿದರು."ಹಿಂದೂ ಹಾಗೂ ಮುಸ್ಲಿಂರ ನಡುವೆ ಸೌಹಾರ್ದ ನೆಲೆಸಬೇಕೆಂದಿದ್ದರೆ ಪೇಜಾವರ ಸ್ವಾಮಿಗಳು ಅಯೋಧ್ಯೆ ಸಂಘರ್ಷ ಸಂದರ್ಭದಲ್ಲೇ ಕರೆ ನೀಡಬಹುದಾಗಿತ್ತು. ವಿಶ್ವ ಹಿಂದೂ ಪರಿಷತ್ ನ ಮಾರ್ಗದರ್ಶಕರಲ್ಲಿ ಒಬ್ಬರಾಗಿರುವ ಪೇಜಾವರ ಶ್ರೀಗಳು ಈಗ ಸೌಹಾರ್ದಕ್ಕೆ ಮುಂದಾಗಿರುವುದೇಕೆ? ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಚುನಾವಣಾ ರಾಜಕೀಯ ನಡೆಸಲಾಗುತ್ತಿದೆ," ಎಂದು ಆರೋಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here