Saturday 10th, May 2025
canara news

ಪಲಿಮಾರುಶ್ರೀಗಳ ಪರ್ಯಾಯದ ಪೂರ್ವಭಾವಿ ಸಂಚಾಲಕ ಸಭೆ

Published On : 02 Jul 2017   |  Reported By : Rons Bantwal


ದೇವಸ್ಥಾನಕ್ಕೆ ಎರಡು ಮುಖಗಳಿರುತ್ತವೆ : ಪಲಿಮಾರುಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.02: ಯಾವುದೇ ದೇವಸ್ಥಾನಕ್ಕೆ ಎರಡು ಮುಖಗಳಿರುತ್ತವೆ. ಸಮಾಜ ಮತ್ತು ಆಧ್ಯಾತ್ಮ ಮುಖಗಳು. ಇತಿಹಾದವುಳ್ಳ ಉಡುಪಿಯಲ್ಲಿನ ಅಷ್ಟಮಠಗಳಲ್ಲಿ ಅಖಂಡವಾಗಿ ಭಕ್ತಿಯಿಂದ ಒಗ್ಗೂಡಿದ ದ್ವಿಮುಖಗಳ ಸೇವಾ ಕಾರ್ಯ ಇಲ್ಲಿ ಸದಾ ನಡೆಯುತ್ತಿವೆ. ಅದನ್ನೇ ನನ್ನ ಪರ್ಯಾಯದ ಸಂಕಲ್ಪವಾಗಿಸಿದ್ದೇನೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಅಪರಾಹ್ನ ಅಂಧೇರಿ ಪಶ್ಚಿಮದ ಇರ್ಲಾದಲ್ಲಿನ ಶ್ರೀ ಅದಮಾರು ಮಠದಲ್ಲಿ ನಡೆಸಲ್ಪಟ್ಟ ಪಲಿಮಾರುಶ್ರೀಗಳ ಪರ್ಯಾಯದ ಪೂರ್ವಭಾವಿ ಸಂಚಾಲಕ ಸಭೆಯನ್ನುದ್ದೇಶಿಸಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿದರು.

ಪಲಿಮಾರುಶ್ರೀಗಳು ಎಲ್ಲಾ ಪಾದಯಾತ್ರೆಗಳನ್ನು ಪೂರೈಸಿ ಚಾರ್ತುಮಾಸ ವೃತ ಪೂರೈಸಿ ಇದೇ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 21ರ ತನಕ ಮುಂಬಯಿಯಲ್ಲಿನ ವಿೂರಾರೋಡ್ ಪೂರ್ವದ ಗೀತಾನಗರ್, ಫೇಸ್ 2, ಇಲ್ಲಿನ ಪಲಿಮಾರು ಮಠದಲ್ಲಿ ನೆಲೆಯೂರಲಿದ್ದು ಮುಂಬಯಿ ನವರಾತ್ರಿಯಿಂದ ದೀಪಾವಳಿ ತನಕ ತಮ್ಮ ಪಾಠ ಪ್ರವಚನ ಆರಾರಾಧನೆ ಕೈಗೊಳ್ಳಲಿದ್ದಾರೆ. ಉಡುಪಿ ಪರ್ಯಾಯ ಶ್ರೀಕೃಷ್ಣನ ಪೂಜೆಯ ಕೈಂಕರ್ಯವನ್ನು ವಹಿಸುವ ಮುನ್ನ ಮುಂಬಯಿ ಭಕ್ತಾಭಿಮಾನಿಗಳನ್ನು ಉಡುಪಿಯ ಪರ್ಯಾಯದ ಅವಧಿಯಲ್ಲಿ ಸೇವೆಗಾಗಿ ಅಹ್ವಾನಿಸಲು ಹಾಗೂ ಶ್ರೀ ದೇವರ ಪ್ರಸಾದ ಸ್ವೀಕರಿಸಲು ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮುಂಬಯಿ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರನ್ನಾಗಿ ಡಾ| ಎಂ.ಎಸ್.ಆಳ್ವ ಹಾಗೂ ಗೌರವಾಧ್ಯಕ್ಷರಾಗಿ ನರೇಂದ್ರ ರಾವ್ ಆಯ್ಕೆಗೊಳಿಸಲಾಯಿತು.


ಶ್ರೀ ಕ್ಷೇತ್ರ ಕಟೀಲು ಇದರÀ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ, ಕೈರಬೆಟ್ಟು ವಿಶ್ವನಾಥ ಭಟ್, ಜಯಕೃಷ್ಣ ಎ.ಶೆಟ್ಟಿ, ವಿರಾರ್ ಶಂಕರ ಶೆಟ್ಟಿ, ಧರ್ಮಪಾಲ ಯು.ದೇವಾಡಿಗ, ಚಂದ್ರಶೇಖರ ಆರ್.ಬೆಳ್ಚಡ, ರಮಾನಂದ ಬಿ.ರಾವ್, ರಾಮಪ್ರಸಾದ ರಾವ್, ಭವಾನಿಶಂಕರ ಹೊನ್ನಾವರ ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಸಭೆಯಲ್ಲಿ ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಂಯ, ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್, ಉದ್ಯಮಿ ಬಿ.ಆರ್ ಶೆಟ್ಟಿ ವಳಕಾಡು, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಭಟ್, ಸುಸೀಲಾ ಸಿ.ಶೆಟ್ಟಿ, ಸುಮತಿ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪಲಿಮಾರು ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಕಲ್ಲಾಜೆ ರಾಧಾಕೃಷ್ಣ ಭಟ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಈ ಬಗ್ಗೆ ಪೂರ್ವಭಾವಿ ಸಭೆಯನ್ನು ಇದೇ ಜು.22ನೇ ಶನಿವಾರ ಸಂಜೆ 5.00 ಗಂಟೆಗೆ ಶ್ರೀ ಪೇಜಾವರ ಮಠ, ಪ್ರಭಾತ್ ಕಾಲೊನಿ, ಸಾಂತಕ್ರೂಜ್ (ಪೂರ್ವ) ಮುಂಬಯಿ ಇಲ್ಲಿ ನಡೆಸಲಾಗುವುದು ಎಂದು ಸರ್ವ ಭಕ್ತಾಭಿಮಾನಿಗಳಿಗೆ ಆಹ್ವಾನಿಸಿ ಸಂಚಾಲಕ ಕಡೆಕಾರು ಶ್ರೀಶÀ ಭಟ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here