ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ದೇಶಾದ್ಯಂತ ಶನಿವಾರದಿಂದ ಹೆದ್ದಾರಿ ಬದಿಯ ಬಾರ್ ಮತ್ತು ವೈನ್ ಶಾಪ್ ಗಳಿಗೆ ಬೀಗ ಜಡಿಯಲಾಗಿದೆ. ಆದರೆ, ಶನಿವಾರ ವಾರಾಂತ್ಯವಾಗಿದ್ದ ಕಾರಣ ಈ ಬಾರ್ ಬಂದ್ ಬಿಸಿ ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ತಟ್ಟಿದೆ.
ಮದ್ಯದಂಗಡಿಯಲ್ಲಿ ತಡರಾತ್ರಿಯವರೆಗೂ ಪಾನಪ್ರಿಯರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದ್ದಾರೆ. ಕೆಲ ಮದ್ಯಪ್ರಿಯರು ಮದ್ಯ ಸಿಗದೆ ಕಂಗಲಾಗಿದ್ದಾರೆ.