Sunday 11th, May 2025
canara news

ಎಟಿಎಂ ಕದ್ದು ಲಕ್ಷಾಂತರ ಹಣ ಲಪಟಾಯಿಸಿದ್ದ ಇಬ್ಬರ ಬಂಧನ

Published On : 05 Jul 2017   |  Reported By : Canaranews Network


ಮಂಗಳೂರು: ಮಂಗಳೂರಿನ ಪಳ್ನೀರ್ ನ ವೃದ್ಧ ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಕದ್ದು ಹಣ ಲಪಟಾಯಿಸಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಪಳ್ನೀರ್ ನ ಬ್ರಿಟ್ಟೋ ಲೇನ್ ನ ಜಾಯ್ಸ್ (70) ಅವರ ಮನೆಯಿಂದ ಎಟಿಎಂ ಕದ್ದು 3,59,000 ರು. ಡ್ರಾ ಮಾಡಿ ಪರಾರಿಯಾಗಿದ್ದ ತಮಿಳುನಾಡಿನ ವೆಲ್ಲೂರು ನಿವಾಸಿ ಫಾತಿಮಾ (28) ಹಾಗೂ ಆಕೆಯ ಪತಿ ಸೆಲ್ವಂ (31) ಎನ್ನುವರನ್ನು ಪೊಲೀಸರು ಬಂಧಿಸಿ, 2.2 ಲಕ್ಷ ನಗದು ಹಾಗೂ ಡ್ರಾ ಮಾಡಿದ ಹಣದಿಂದ ಖರೀದಿಸಿದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶ ಪಡಿಸಿಕೊಂಡಿದ್ದಾರೆ.

ಜಾಯ್ಸ್ ವಿಧೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಫಾತೀಮಾ ಎಟಿಎಂ ಕಾರ್ಡ್ ಹಾಗೂ ಪಾಸ್ವರ್ಡ್ ಬರೆದಿಟ್ಟಿದ್ದ ಡೈರಿ ಎಗರಿಸಿ ಪರಾರಿಯಾಗಿದ್ದಳು ಬಳಿಕ ಈಕೆ ಮನೆ ಕೆಲಸವನ್ನು ಬಿಟ್ಟಿದ್ದಳು ಎನ್ನಲಾಗಿದೆ. ಜಾಯ್ಸ್ ಸ್ವದೇಶಕ್ಕೆ ಮರಳಿದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಇನ್ಸ್ ಸ್ಪೆಕ್ಟರ್ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here