Sunday 11th, May 2025
canara news

ಪತ್ರಕರ್ತ ಆರ್‍ಬಿ ಜಗದೀಶ್ ಮೇಲೆ ಪೊಲೀಸ್ ದೌರ್ಜನ್ಯ ಪೊಲೀಸ್ ಆಯುಕ್ತರಿಗೆ ಪತ್ರಕರ್ತರ ಸಂಘದಿಂದ ಮನವಿ

Published On : 08 Jul 2017   |  Reported By : Rons Bantwal


ಮಂಗಳೂರು ಜೂ.07: ಪತ್ರಕರ್ತ ಆರ್.ಬಿ. ಜಗದೀಶ್ ಅವರ ಮೇಲೆ ಬಳ್ಳಾರಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪೊಲೀಸ್ ಆಯುಕ್ತ ಟಿ.ಎನ್.ಸುರೇಶ್ ಅವರಿಗೆ ಮನವಿಯನ್ನು ಸಲ್ಲಿಸಿದೆ.

ಕಳೆದ ಶುಕ್ರವಾರ (ಜೂ.30) ಮೂಡಬಿದ್ರೆ ಅಲ್ಲಿನ ಶಿರ್ತಾಡಿಯಿಂದ ಕರ್ತವ್ಯದ ನಿಮಿತ್ತ ಕಾರ್ಕಳದಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿರುವ ಆರ್.ಬಿ ಜಗದೀಶ್ ತನ್ನ ಕಾರಿನಲ್ಲಿ ಕಾರ್ಕಳಕ್ಕೆ ತೆರಳುತ್ತಿದ್ದಾಗ ಬಳ್ಳಾರಿಯ ಪೆÇಲೀಸರಿಬ್ಬರ ಸಹಿತ ಒಟ್ಟು ನಾಲ್ಕು ಮಂದಿ ಆರ್.ಬಿ.ಜಗದೀಶ್ ಅವರ ಕಾರನ್ನು ಅಡ್ಡಗಟ್ಟಿ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಿದರೂ ಪೆÇಲೀಸರು ಕ್ರಮ ಕೈಗೊಳ್ಳಲಿಲ್ಲ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಗಮನ ಹರಿಸಿ ಪತ್ರಕರ್ತರಿಗೆ ನ್ಯಾಯ ಹಾಗು ರಕ್ಷಣೆ ಒದಗಿಸಿ ಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಬಳಿಕ ಪೆÇಲೀಸ್ ಮಹಾನಿರ್ದೇಶಕರಿಗೂ ಮನವಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಇಂದಿಲ್ಲಿ ಪೆÇಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರಾದ ಹಿಲರಿ ಕ್ರಾಸ್ತಾ, ಹರೀಶ್ ಮೋಟುಕಾನ, ಗಣೇಶ್ ಮಾವಂಜಿ, ಆರ್.ಬಿ ಜಗದೀಶ್, ಬಶೀರ್ ಕಲ್ಕಟ್ಟ, ಬೃಜೇಶ್, ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here