Sunday 11th, May 2025
canara news

ಪಟ್ಲ ಫೌಂಡೇಶನ್ ಟ್ರಸ್ಟ್‍ನ ನೂತನ ಯೋಜನೆ-ಯಕ್ಷಗಾನ ತರಬೇತಿ ಕೇಂದ್ರಕ್ಕೆ ಶಾಸಕ ಮೊೈದಿನ್ ಬಾವಾ ಅವರಿಂದ ನಿವೇಶನದ ಭರವಸೆ

Published On : 08 Jul 2017   |  Reported By : Rons Bantwal


ಮಂಗಳೂರು, ಜು.08: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ನೂತನ ಯೋಜನೆ ಆದ ಯಕ್ಷಗಾನ ತರಬೇತಿ ಕೇಂದ್ರ ಮತ್ತು ಗ್ರಂಥಾಲಯ ಸ್ಥಾಪನೆಗೆ ಸರಕಾರಿ ದರದಲ್ಲಿ ಭೂಮಿಯನ್ನು ಒದಗಿಸಿ ಕೊಡುವುದಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊೈದಿನ್ ಬಾವಾ ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳ ನಿಯೋಗವು ಶಾಸಕರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಾವಿದರಿಗೆ ಆಸರೆಯಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ಕೈಗೊಳ್ಳುವ ಯೋಜನೆಯಲ್ಲಿ ತಾವು ಕೂಡ ಪಾಲ್ಗೊಳ್ಳಬೇಕು ಎಂಬ ಮನವಿಗೆ ಸ್ಪಂದಿಸಿದ ಶಾಸಕ ಮೊೈದಿನ್ ಬಾವಾ ಅವರು ಪಟ್ಲ ಫೌಂಡೇಶನ್‍ನ ಮುಖ್ಯ ಬೇಡಿಕೆಯಾದ ಯಕ್ಷಗಾನ ತರಬೇತಿ ಕೇಂದ್ರ ಹಾಗೂ ಗ್ರಂಥಾಲಯಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮುಚ್ಚೂರುನಲ್ಲಿ ಸುಮಾರು 8 ಎಕರೆ ಜಾಗ ಸರಕಾರಿ ದರದಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.

ತಾನು ಕೂಡಾ ಯಕ್ಷಗಾನ ಕ್ಷೇತ್ರದ ಬಗ್ಗೆ ಆಸಕ್ತಿ ಉಳ್ಳವನು. ಬಾಲ್ಯದ ದಿನಗಳಲ್ಲಿ ಶ್ರೀ ದೇವಿ ಮಹಾತ್ಮೆ ಅಂತಹ ಪೌರಾಣಿಕ ಪ್ರಸಂಗಗಳನ್ನು ನೋಡಿ ಯಕ್ಷಗಾನದ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಂಡಿದ್ದೇನೆ. ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ಬಗ್ಗೆ ಕೈಗೊಂಡ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು.

ಮೊೈದಿನ್ ಬಾವಾ ಅವರನ್ನು ಪಟ್ಲ ಸತೀಶ್ ಶೆಟ್ಟಿ ತಂಡ ಭೇಟಿ ಮಾಡಿದ ನಿಯೋಗದಲ್ಲಿ ದುಬಾಯಿ ಘಟಕದ ಟ್ರಸ್ಟಿ ರಘುರಾಮ ಶೆಟ್ಟಿ, ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ| ಸುದೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಟ್ರಸ್ಟಿ ರವಿ ಶೆಟ್ಟಿ ಅಶೋಕ ನಗರ, ಕಾಪೆರ್Çೀರೇಟರ್ ಗುಣಶೇಖರ ಶೆಟ್ಟಿ, ಪದ್ಮನಾಭ ಎಲ್ ಶೆಟ್ಟಿ, ಶೈಲೇಶ್ ಕೃಷ್ಣಾಪುರ, ದೀಪಕ್ ಶೆಟ್ಟಿ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here