Sunday 11th, May 2025
canara news

‘ಶಿಕ್ಷಣ ಕೇವಲ ಉದ್ಯೋಗಕ್ಕಲ್ಲಾ, ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಲೂ ಶಿಕ್ಷಣ ಅಗತ್ಯ’

Published On : 09 Jul 2017   |  Reported By : Bernard J Costa


ಕುಂದಾಪುರ,ಜು.8 : ‘ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಇರುವುದಲ್ಲಾ, ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಲೂ ಶಿಕ್ಷಣ ಅಗತ್ಯವಾಗಿ ಬೇಕು. ಮನುಷ್ಯ ಇತರರ ಜೊತೆ ಸಹಬಾಳ್ವೆಯ ಜೊತೆ ಪ್ರೀತಿ, ಸೇವೆ, ಒಳ್ಳೆಯ ಕಾಯಕ, ಮಾಡಿ, ಒಬ್ಬ ಪರಿಪೂರ್ಣ ಮನುಷ್ಯಾನಾಗಿ ಜೀವಿಸ ಬೇಕು, ಆವಾಗ ಮಾತ್ರ ಜೀವನ ಸಾರ್ಥಕತೆ ಪಡೆಯುತ್ತದೆ. ಇದಕ್ಕಾಗಿ ಎಳೆದರಲ್ಲಿ ಉತ್ತಮ ಮನುಷ್ಯನಂತೆ ಮಾಡುವ ಶಿಕ್ಷಣ ಬೇಕು. ಅಹಂಕಾರ ತ್ಯಜಿಸಿ ಪ್ರೀತಿ ಮಮತೆಯ ಜೊತೆ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತ ಗುಣವನ್ನು ಬೆಳೆಸಿಕೊಳ್ಳ ಬೇಕು. ಹೆತ್ತವರೂ ತಮ್ಮ ಮಕ್ಕಳ ಕಾಳಜಿ ಇರಬೇಕು, ಅತಿಯಾದ ಮುದ್ದು ಸಲ್ಲದು’ ಎಂದು ಕನ್ನಡ ಸಾಹಿತಿ, ಉಡುಪಿ ಜಿಲ್ಲಾ ಕನ್ನಡ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಕುಂದಾಪುರ ಸಂತ ಮೇರಿಸ್ ಜೂ. ಕಾಲೇಜು ವಿಧ್ಯಾರ್ಥಿ ಮಂತ್ರಿ ಮಂಡಳವನ್ನು ಉದ್ಘಾಟಿಸಿದ ಮಕ್ಕಳಿಗೆ ಹಿತವಚನ ನೀಡಿದರು.

 

 

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾ ಇವರು 17-18 ರ ಅವಧಿಯ ಕಾಲೇಜು ವಿಧ್ಯಾರ್ಥಿ ಮಂಡಳಿಯಲ್ಲಿ ಆರಿಸಿ ಬಂದವರಿಗೆ ಪ್ರಮಾಣ ವಚನ ಬೋಧಿಸಿ, ಅಭಿನಂದಿಸಿ ಹಿತವಚನ ನೀಡಿದರು. ಈ ಸಂದರ್ಭದಲ್ಲಿ ರಾಷ್ಠ್ರಿಯ ವಾಲಿಬಾಲ್ ಆಟಗಾರ ಕಾಲೇಜಿನ ಹಳೆ ವಿಧ್ಯಾರ್ಥಿ ಗ್ಲೇವನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು.

ಕಾಲೇಜು ಪ್ರಿನ್ಸಿಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಶುಭಾಷಯ ಕೋರಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರಾಧ್ಯಪಕ ರವಿ ಶೆಟ್ಟಿ ಸ್ವಾಗತಿಸಿದರು. ಕಾಲೇಜು ವಿಧ್ಯಾರ್ಥಿನಿ ಸ್ಯಾಂಡ್ರಾ ಅಂಟೋಲಿ ಕಾರ್ಯಕ್ರಮ ನಿರೂಪಿಸಿದರೆ, ಗ್ಲೇನ್ ಫೆರ್ನಾಂಡಿಸ್ ಧನ್ಯವಾದವನ್ನು ಅರ್ಪಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here