Sunday 11th, May 2025
canara news

ಸಿಎ| ಜಗದೀಶ್ ಬಿ.ಶೆಟ್ಟಿ ಅವರಿಂದ ಡಾಕ್‍ಯಾರ್ಡ್ ಅಧಿಕಾರಿಗಳಿಗೆ ಜಿಎಸ್‍ಟಿ ತೆರಿಗೆ ಕಾರ್ಯಗಾರ

Published On : 09 Jul 2017   |  Reported By : Rons Bantwal


ಮುಂಬಯಿ, ಜು.09: ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಯುವ ಆಥಿರ್üಕ ತಜ್ಞ , ಸಾಮಾಜಿಕ ರಂಗದ ತೆರೆಮರೆಯ ಸಮಾಜ ಸೇವಕ, ಪ್ರಸಿದ್ಧ ಯುವ ಜನಪ್ರಿಯ ಲೆಕ್ಕ ಪರಿಶೋಧಕ ಸಿಎ| ಜಗದೀಶ್ ಬಿ.ಶೆಟ್ಟಿ ಅವರು ಇಂದಿಲ್ಲಿ ಮುಂಬಯಿಯಲ್ಲಿನ ವಿಶ್ವಪ್ರಸಿದ್ಧ ಬಂದರು ಮಜ್‍ಗಾಂವ್ ಡಾಕ್‍ಯಾರ್ಡ್ ಲಿಮಿಟೆಡ್‍ನ ಅಧಿಕಾರಿ ವರ್ಗಕ್ಕೆ ಜಿಎಸ್‍ಟಿ ತೆರಿಗೆ ಕಾರ್ಯಗಾರ ನಡೆಸಿದರು.

ಜಗದೀಶ್ ಬಿ.ಶೆಟ್ಟಿ ಅವರು ಕಾರ್ಯಗಾರದಲ್ಲಿ ಭಾಗವಹಿಸಿ ಕಳೆದ ಜುಲೈ ಆದಿಯಿಂದ ಮೋದಿ ಸರಕಾರವು ರಾಷ್ಟ್ರದಾದ್ಯಂತ ಜಾರಿ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ವ್ಯಾಪಾರ ವಹಿವಾಟುಗಳ ಶಿಸ್ತುಬದ್ಧತೆ, ವ್ಯವಹಾರದಲ್ಲಿ ಭವಿಷ್ಯತ್ತಿನ ಹಣಕಾಸು ವ್ಯವಸ್ಥೆ ಯಾವ ರೀತಿ ಕಾನೂನುಬದ್ಧವಾಗಿ ರೂಢಿಸಿ ಕೊಳ್ಳುವ ಬಗ್ಗೆ ಹಾಗೂ ಆಧುನಿಕ ಲೆಕ್ಕಪತ್ರಗಳ ವಿಶೇಷ ಮಾಹಿತಿ ನೀಡಿದರು.

ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯ ಮಧುಬನ್ ಇಂಡಸ್ಟೀಯಲ್ ಎಸ್ಟೇಟ್‍ನಲ್ಲಿ ಶೆಟ್ಟಿ ನಾಯ್ಕ್ ಎಂಡ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಹೆಸರಲ್ಲಿ ಸಂಸ್ಥೆಯನ್ನು ಹೊಂದಿರುವ ಸಿಎ| ಜಗದೀಶ್ ಬಿ.ಶೆಟ್ಟಿ ಅವರು ಬಿಕಾಂ ಪದವೀಧರರಾಗಿದ್ದು, ಫಿನಾನ್ಶಲ್ ಕಾಂಡಕ್ಟ್ ಆಥಾರಿಟಿ (ಎಫ್‍ಸಿಎ), ಡಿಪೆÇ್ಲೀಮಾ ಇನ್ ಇನ್‍ಫರ್‍ಮೇಶನ್ ಸಿಸ್ಟಮ್ಸ್ ಆಡಿಟ್ (ಡಿಐಎಸ್‍ಎ) ಮಾನ್ಯತೆ ಗಳಿಸಿರುವ ಜೊತೆಗೆ ಎಲ್‍ಎಲ್‍ಬಿ ಸನದು ಮೂಲಕ ಕಾನೂನು ವಲಯದಲ್ಲೂ ಮೇಧಾವಿ ಆಗಿರುವರು. ಹಣಕಾಸು ಕ್ಷೇತ್ರದ ಅತ್ಯಾದ್ಭುತ ಪಾಂಡಿತ್ಯ ಹಾಗೂ ವಾಕ್ಚಾತುರ್ಯತೆವುಳ್ಳ ಜಗದೀಶ್ ಶೆಟ್ಟಿ ಮಂಗಳೂರು ಸುರತ್ಕಲ್ ಮೂಲದವರಾಗಿದ್ದು ಅಲ್ಲಿನ ರಾಧಾ ಹೇರಿಟೇಜ್‍ನ ನಿವಾಸಿ ಆಗಿದ್ದರೂ ಕಳೆದ ಸುಮಾರು ಎರಡು ದಶಕಗಳಿಂದ ಮುಂಬಯಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವಾ ನಿರತರಾಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here