ಕುಂದಾಪುರ: ಪ್ರಥಮನ ಏಕಾದಶಿಯ ಪ್ರಯುಕ್ತ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಆಹ್ವಾನಿತ ಭಜನಾ ತಂಡದವರಿಂದ ಏಕಾಹ ಭಜನೆ ನಡೆಯಿತು. ರಥಬೀದಿಯಲ್ಲಿನ ಶ್ರೀ ಕೋದಂಡ ರಾಮ ಮಂದಿರದಲ್ಲಿಯೂ ಅಂದು ಮುಂಜಾನೆ ಏಳರಿಂದ ಸಂಜೆ ಏಳರವರೆಗೆ ಭಜನೆ ನಡೆಸಲಾಯಿತು.
ಆಸ್ತಿಕ ಸಮಾಜದ ಪದಾಧಿಕಾರಿಗಳು, ಉಭಯ ದೇವಳಗಳ ಆಡಳಿತ ಸಮಿತಿಯವರು ಈ ಸಂದರ್ಭ ಉಪಸ್ಥಿತರಿದ್ದರು.