Thursday 3rd, July 2025
canara news

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಯತಿವರ್ಯರಿಂದ ಜು.14-ಸೆ.6ರ ತನಕ ಗೋವಾದ ಮಠದಲ್ಲೇ ಚಾತುರ್ಮಾಸ್ಯ ವ್ರತಾಚರಣೆ

Published On : 12 Jul 2017   |  Reported By : Rons Bantwal


ಮುಂಬಯಿ, ಜು.12: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರೊಂದಿಗೆ ಇದೇ ಜು.14 ರಿಂದ ಸೆಪ್ಟೆಂಬರ್ 6ರ ತನಕ ಗೋವಾ ಅಲ್ಲಿನ ಕಾಣಕೋಣದÀ ಪರ್ತಗಾಳಿ ಮಠದಲ್ಲಿ 55 ದಿನಗಳ ಚಾತುರ್ಮಾಸ್ಯ ವ್ರತ ಕೈಗೊಳ್ಳÀಲಿದ್ದಾರೆ.

1973ರಲ್ಲಿ ಗುರು ಪೀಠದ ಜವಾಬ್ದಾರಿ ಸ್ವೀಕರಿಸಿದ ನಂತರ ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು ಪರ್ತಗಾಳಿ ಮಠದಲ್ಲಿ 1977ರಲ್ಲಿ ಪಂಚಶತಾಬ್ಧಿ ಮಹೋತ್ಸವವನ್ನು ಆಚರಿಸಿದ್ದರು. ಬಳಿಕ ಕಳೆದ ಫೆ.08 ಮತ್ತು 09ರಂದು ಬೆಳಗಾವಿ ಅಲ್ಲಿನ ವಟು ಉದಯ ಭಟ್ ಅವರನ್ನು ಲಕ್ಷಾಂತರ ಭಕ್ತಾಧಿಗಳ ಉಪಸ್ಥಿತಿಯಲ್ಲಿ ಶಿಷ್ಯಸ್ವಾಮಿಗಳನ್ನಾಗಿ ಸ್ವೀಕರಿಸಿದ್ದು, ಇದೇ ಜುಲೈ 14ರ ಶುಕ್ರವಾರ ಕಾಣಕೋಣದ ಪರ್ತಗಾಳಿ ಮಠದಲ್ಲಿ ಸಂಜೆ 6.00 ಗಂಟೆಯಿಂದ ಚಾತುರ್ಮಾಸ್ಯ ವ್ರತ ಕೈಗೊಳ್ಳÀಲಿದ್ದಾರೆ. ಆ ಪ್ರಯುಕ್ತ 6.30ರ ತನಕ ಧರ್ಮಸಭಾ, ರಾತ್ರಿ 8.15 ಗಂಟೆಗೆ ಮಹಾಪೂಜೆ, ಮಹಾ ಪ್ರಸಾದ ವಿತರಣೆ ನಡೆಯಲಿದೆ.

ಜು.27 ರಂದು ನಾಗರ ಪಂಚಮಿ, ಆಗಸ್ಟ್ 6ರಂದು ಅಭಿನಂದನಾ ದಿನಾಚರಣೆ, ಆ.14ರಂದು ಶ್ರೀಕೃಷ್ಣಾಷ್ಠಮಿ, ಆ.25ರಂದು ಗಣೇಶ ಚತುಥಿರ್ü, ಸೆಪ್ಟೆಂಬರ್ 05 ರಂದು ಅನಂತ ಚತುರ್ಧಶಿ ಇತ್ಯಾದಿ ಕಾರ್ಯಕ್ರಮಗಳು ಶ್ರೀಮಠದಲ್ಲಿ ನೆರವೇರಲಿದೆ. ಸೆ.6 ರಂದು ಮೃತ್ತಿಕಾ ವಿಸರ್ಜನೆಯ ಮೂಲಕ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಸಮಾಪ್ತಿಗೊಳ್ಳಲಿದೆ.

ಶ್ರೀಮದ್ ವಿದ್ಯಾಧಿರಾಜತೀರ್ಥರ ಈ ಬಾರಿಯ ಚಾತುರ್ಮಾಸ್ಯ ವ್ರತಾಚರಣೆಯ ಕಾಲಾವಧಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಪರ್ತಗಾಳಿ ಮಠದ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದೆಂಪೆÇ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಶಿಷ್ಯ ಸ್ವಾಮೀಜಿ ಸ್ವೀಕರಿಸಿದ ನಂತರ ಇದೇ ಮೊದಲಬಾರಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಠದಲ್ಲೇ ಆಯೋಜಿಸಲಾಗಿದೆÉ. ಆದುದರಿಂದ ಈ ಬಾರಿ ಒಂದೇ ಕಾಲಾವಧಿಯಲ್ಲಿ ಈರ್ವರು ಯತಿವರ್ಯರ ದರ್ಶನ ಏಕಕಾಲಕ್ಕೆ ಭಕ್ತಾದಿಗಳಿಗೆ ಲಭಿಸಲಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಎಸ್.ಭಟ್ ಹಾಗೂ ಜಿಎಸ್‍ಬಿ ಗಣೇಶೋತ್ಸವ ಮಂಡಲದ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಮತ್ತು ಸರ್ವ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here