Saturday 10th, May 2025
canara news

ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಶ್ರೇಣಿಗೆ ಚಾಲನೆಯನ್ನಿತ್ತ ಮುಂಬಯಿ ಕನ್ನಡ ಸಂಘ

Published On : 17 Jul 2017   |  Reported By : Rons Bantwal


ಕನ್ನಡ ಸಂಘದಿಂದ ಕನ್ನಡದ ಕ್ರಾಂತಿ ಸಾಧ್ಯವಾಗಿದೆ : ಎಸ್.ಕೆ ಸುಂದರ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.17: ಕನ್ನಡ ಸಂಘವು ಅನೇಕ ದಶಕಗಳಿಂದ ಹೊರನಾಡ ಕರ್ಮಭೂಮಿಯಲ್ಲಿ ಕನ್ನಡಾಂಭೆಯ ಸೇವೆಯಲ್ಲಿ ನಿರತವಾಗಿರುವುದು ಶ್ಲಾಘನೀಯ. ಕಳೆದ ಸುಮಾರು ಹದಿನೈದು ವರ್ಷಗಳಿಂದ ಅನ್ಯಭಾಷಿಗರಿಗೆ ಕನ್ನಡ ಅಭ್ಯಾಸದಲ್ಲಿ ನಿರತವಾಗಿ ನಿಸ್ವಾರ್ಥವಾಗಿ ಕನ್ನಡದ ಸೇವೆಯಲ್ಲಿ ತೊಡಗಿಸಿ ಭವ್ಯ ಇತಿಹಾಸ ಹೊಂದಿರುವುದು ಅಭಿಮಾನ ತಂದಿದೆ. ಕರುನಾಡು ಕರ್ನಾಟಕದ ವಿಶೇಷಣಗಳನ್ನು ಹೊತ್ತಿರುವ ನೆಲದಳ್ಳಾಗದ ಕನ್ನಡ ಸೇವೆ ಇಂತಹ ಸಂಸ್ಥೆಗಳಿಂದ ಆಗುತ್ತಿದೆ. ಬಹುಶಃ ಕನ್ನಡ ಸಂಘದಿಂದ ಕನ್ನಡದ ಕ್ರಾಂತಿ ಸಾಧ್ಯವಾಗಿದೆ ಎಂದು ಕನ್ನಡದ ಸೇನಾನಿ, ಸಾಹಿತ್ಯ ಬಳಗ ಮುಂಬಯಿ ಇದರ ಗೌರವ ಕಾರ್ಯದರ್ಶಿ ಎಸ್.ಕೆ ಸುಂದರ್ ನುಡಿದರು.

ಮುಂಬಯಿ ಕನ್ನಡ ಸಂಘ (ರಿ.) ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕಿರು ಸಭಾಗೃಹಲ್ಲಿ ಜರುಗಿಸ ಲಾಗಿದ್ದು ಸುಂದರ್ ಅವರು ದೀಪ ಬೆಳಗಿಸಿ 2017-18ನೇ ಸಾಲಿನ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಚಾಲನೆ ನೀಡಿ ಕನ್ನಡ ಕಲಿಕಾ ವಿದ್ಯಾಥಿರ್üಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿ ಮಾತನಾಡಿದರು.

ಆಧುನಿಕ ಭಾರತದಲ್ಲಿ ರರಾಜಿಸುತ್ತಿರುವ ಇಂಗ್ಲೀಷ್ ವ್ಯಾಮೋಹದಲ್ಲೂ ಕನ್ನಡ ಕಲಿಯುವ ಅವಶ್ಯಕತೆ ಮತ್ತು ಅದರ ಅನುಕೂಲತೆ ಬಗ್ಗೆ ಸಂಘದ ಕನ್ನಡ ತರಬೇತಿ ಶಿಕ್ಷಕಿ ಅರ್ಚನಾ ಆರ್.ಪೂಜಾರಿ ತಿಳಿಸಿ ಕನ್ನಡ ಅಭ್ಯಾಸಿಸಿ ತೇರ್ಗಡೆಯಾದ ವಿದ್ಯಾಥಿರ್üಗಳಿಗೆ ಅಭಿನಂದಿಸಿದರು.

ಗೌ| ಜೊತೆ ಕಾರ್ಯದರ್ಶಿ ಸೋಮನಾಥ್ ಕರ್ಕೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಎಸ್.ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವಾಚನಾಲಯ ಮುಖ್ಯಸ್ಥ ಎಸ್.ಕೆ ಪದ್ಮನಾಭ ಪ್ರಾರ್ಥನೆ ಹಾಡಿದರು. ನರ್ಮದಾ ಕಿಣಿ ಪ್ರಮಾಣಪತ್ರ ಸ್ವೀಕೃತ ವಿದ್ಯಾಥಿರ್üಗಳ ಯಾದಿ ವಾಚಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್.ಬಂಗೇರ ಅತಿಥಿü ಪರಿಚಯಗೈದರು. ಗೌರವ ಖಜಾಂಚಿ ಸುಧಾಕರ್ ಸಿ.ಪೂಜಾರಿ ವಂದನಾರ್ಪಣೆಗೈದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here