Saturday 10th, May 2025
canara news

ಕರಾವಳಿಯ 60 ಗ್ರಾಮಗಳಿಗೆ ಇನ್ನು ಪವರ್ ಕಟ್ ಇಲ್ಲ !

Published On : 18 Jul 2017   |  Reported By : Canaranews Network


ಮಂಗಳೂರು: ಪ್ರತೀ ವಿಧಾನಸಭಾ ಕ್ಷೇತ್ರದ ತಲಾ 5 ಗ್ರಾಮಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರನ್ವಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟು 60 ಗ್ರಾಮಗಳಲ್ಲಿ ಪವರ್ ಕಟ್ ಸಮಸ್ಯೆಗೆ ಮುಕ್ತಿ ದೊರೆಯುವ ಆಶಾವಾದ ಮೂಡಿದೆ.

ದ.ಕ. ಜಿಲ್ಲೆಯ 35 ಗ್ರಾಮಗಳು ಹಾಗೂ ಉಡುಪಿ ಜಿಲ್ಲೆಯ 25 ಗ್ರಾಮಗಳು ಮುಂದಿನ ದಿನದಲ್ಲಿ ವಿದ್ಯುತ್ ಅಡಚಣೆ ರಹಿತ ಗ್ರಾಮಗಳಾಗಿ ಮೂಡಿ ಬರಲಿದೆ. ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾದರಿ ವಿದ್ಯುತ್ ಗ್ರಾಮ ಸಂಕಲ್ಪದ ಬಗ್ಗೆ ಈಗಾಗಲೇ ಪ್ರಕಟನೆ ಕೂಡ ಹೊರಡಿಸಿದ್ದಾರೆ.ಈ ಯೋಜನೆಯನ್ವಯ ಪ್ರತೀ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಾದರಿ ವಿದ್ಯುತ್ ಗ್ರಾಮಕ್ಕೆ ಯೋಜನೆ ಹಾಕಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ ಗ್ರಾಮ ಯೋಜನೆ ಅನುಷ್ಠಾನಕ್ಕೆ ಗುರಿ ಇರಿಸಲಾಗಿದೆ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here