Saturday 10th, May 2025
canara news

ತಿರುವೈಲು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ

Published On : 19 Jul 2017   |  Reported By : Rons Bantwal


ಮಂಗಳೂರು, ಜು.19: ಮಂಗಳೂರು ಹೊರ ವಲಯದ ವಾಮಂಜೂರು ತಿರುವೈಲು ಗ್ರಾಮದ ಸಂಕೇಸದಲ್ಲಿ ಬಾಬು ಸಾಲ್ಯಾನ್ ಮತ್ತು ಸಹೋದದರು ತಮ್ಮ ಗದ್ದೆಯಲ್ಲಿ ಶಾಲಾ ಮಕ್ಕಳಿಗಾಗಿ ಇಂದಿಲ್ಲಿ ಸೋಮವಾರ (ಜು.17) ಬೆಳಿಗ್ಗೆ ನೇಜಿ ನಾಟಿ ಮಾಡುವ ಪ್ರಾತ್ಯಕ್ಷಿತೆ ಆಯೋಜಿಸಲಾಗಿದ್ದು, ಇದರಲ್ಲಿ ತಿರುವೈಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 6ನೇ ಮತ್ತು 7ನೇ ತರಗತಿಯ ಸುಮಾರು 40 ವಿದ್ಯಾಥಿರ್üಗಳು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ನಗರ ಸೇವಕಿ ಹೇಮಲತಾ ಸಾಲ್ಯಾನ್ ಪಾಲ್ಗೊಂಡರು.

ಅತಿ ಉತ್ಸಾದಿಂದ ಕೆಸರು ಗದ್ದೆಯಲ್ಲಿ ನೇಜಿ ನಾಟಿ ಮಾಡಿದ ಮಕ್ಕಳು, `ಓ ಬೇಲೆ' ಕಬಿತೆಗೆ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಸಾಲ್ಯಾನ್ ಕುಟುಂಬದ ರಘು, ರಾಜು, ಲಿಂಗಪ್ಪ, ಉಮನಾಥ ಹಾಗೂ ಸ್ಥಳೀಯ ಗಣ್ಯರಾದ ಸತೀಶ್ ಶೆಟ್ಟಿ, ದಿನೇರ್ಶ ಕರ್ಕೇರ, ತಾರಿಕಾರಿಯ ಜಗದೀಶ್ ಶೆಟ್ಟಿ, ಗಂಗಯ್ಯ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

``ನಮಗೆ ಇದೊಂದು ಹೊಸ ಅನುಭವ. ಇಲ್ಲಿಂದಲೇ ನಾವು ಉಣ್ಣುವ ಅಕ್ಕಿ ಬರುತ್ತದೆ ಮತ್ತು ಇದಕ್ಕಾಗಿ ರೈತರೊಬ್ಬರು ಇಷ್ಟೊಂದು ಕಷ್ಟ ಪಡಬೇಕಾಗುತ್ತದೆ ಎಂಬುದರ ನೈಜ ಅನುಭವ ನೇಜಿ ನೆಟ್ಟಾಗಲೇ ಗೊತ್ತಾಯಿತು'' ಎಂದು 7ನೇ ತರಗತಿ ವಿದ್ಯಾಥಿರ್ü ಮೊಹಮ್ಮದ್ ಮುಸ್ತಾಫ ಹೇಳಿದ. ``ಶಾಲಾ ಪಠ್ಯ ಚಟುವಟಿಕೆಗಿಂತ ಭಿನ್ನವಾದ ಈ ಕಾರ್ಯಕ್ರಮ ತುಂಬ ಖುಷಿ ಕೊಟ್ಟಿತು'' ಎಂದು ಶರಣ್ಯ ಮತ್ತು ತೇಜಸ್ವಿನಿ ಹೇಳಿದರು.

ಇದೊಂದು ಅಪೂರ್ವ ಸಂದರ್ಭ. ಶಾಲಾ ಮಕ್ಕಳು ನೇಜಿ ನಾಟಿ ಮಾಡಿ, ಅದರ ಅನುಭವ ಪಡೆದುಕೊಳ್ಳುವಂತಾಯಿತು ಎಂದು ಶಾಲಾ ಶಿಕ್ಷಕರಾದ ಗೋಪಾಲ, ಗೀತಾ ರೈ ನುಡಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here