Saturday 10th, May 2025
canara news

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಮಳೆ ನೀರು ಇಂಗಿಸುವ ಕಾರ್ಯಗಾರ

Published On : 19 Jul 2017


ಕುಂದಾಪುರ, ಜು.19: ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಮಳೆ ನೀರು ಇಂಗಿಸುವ ಕಾರ್ಯಗಾರವು ಕುಂದಾಪುರ ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಕಾರ್ಯಗಾರಕ್ಕೆ ಶುಭ ಕೋರಿದರು.

 

ಕಾರ್ಯಗಾರವನ್ನು ಮಳೆ ನೀರು ಇಂಗಿಸುವ ತಜ್ನ ಜೋಸೆಫ್ ರೆಬೆಲ್ಲೊ ಇವರು ನೀರಿನ ಮಹತ್ವದ ಬಗ್ಗೆ ಅರಿವು ನೀಡುತ್ತಾ, ನೀರು ಪೆÇಲಾಗುತ್ತಿರುವ ಬಗ್ಗೆ, ನದಿಗಳಲ್ಲಿ ಕೊಳಚೆ ಎಸೆದು ಮಲೀನವಾಗುವ ಬಗ್ಗೆ ತಿಳಿಸಿ. ಮಳೆಗಾಲದ ನೀರು ವಿಪರಿತವಾಗಿ ಪೆÇೀಲಾಗುತ್ತಿದೆ, ಅದನ್ನು ಭೂಮಿಗೆ ಇಂಗಿಸಿದರೆ ಭೂಮಿಯ ಒಳಗಿನ ಜಲಮಟ್ಟ ಉತ್ತಮಗೊಳ್ಳುತ್ತದೆ ಇದರಿಂದ ಜಲ ಕ್ಷಾಮ ತಪ್ಪಿಸಬಹುದು ಎಂದು ತಿಳಿಸುತ್ತಾ ಪ್ರಾತ್ಯಕ್ಷಕಿ ಮೂಲಕ ನೀರು ಇಂಗಿಸುವ ವಿಧಾನಗಳನ್ನು ವಿವರಿಸಿದರು.

ವಲಯ ಕಥೊಲಿಕ್ ಸಭಾದ ಅಧ್ಯಕ್ಷ ಜಾಕೋಬ್ ಡಿಸೋಜಾ ಸ್ವಾಗತಿಸಿದರು, ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ಲೈವನ್ ಡಿಸೋಜಾ, ನೀಯೊಜಿತ ಅಧ್ಯಕ್ಷ ಮೈಕಲ್ ಪಿಂಟೊ, ಕೋಶಾಧಿಕಾರಿ ವಿನಯ್ ಡಿಆಲ್ಮೇಡಾ ಮತ್ತು ವಲಯ ಮತ್ತು ಕುಂದಾಪುರ ವಲಯದ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. ವಿನೋದ್ ಕ್ರಾಸ್ಟಾ ಧನ್ಯವಾದ ಅರ್ಪಿಸಿದರು,

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here