Saturday 10th, May 2025
canara news

ಬಾಲಕನಿಗೆ ಲೈಂಗಿಕ ಕಿರುಕುಳ :ಆಸ್ಪತ್ರೆಯ ಸೆಕ್ಯೂರಿಟಿಗಾರ್ಡ್ ಬಂಧನ

Published On : 20 Jul 2017   |  Reported By : Canaranews


ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕನಿಗೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಟ್ವಾಳ ಗೋಳ್ತಮಜಲಿನ ಸೀತಾರಾಮ ಶೆಟ್ಟಿ (35) ಬಂಧಿತ ಆರೋಪಿ. ಸುರತ್ಕಲ್ ಕೃಷ್ಣಾಪುರ ಮೂಲದ ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಕಳೆದ 5-6 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಅವರನ್ನು ನೋಡಿಕೊಳ್ಳಲು ಮಂಗಳವಾರ ಅವರ ಅಪ್ರಾಪ್ತ ವಯಸ್ಕ ಪುತ್ರ ಆಸ್ಪತ್ರೆಗೆ ಬಂದಿದ್ದ. ರಾತ್ರಿ ವೇಳೆ ಆತನಿಗೆ ಮಲಗಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲದಿದ್ದ ಕಾರಣ ಆತನ ಸ್ಥಿತಿ ಗಮನಿಸಿದ ಆರೋಪಿ ಆತನಿಗೆ ಆಸ್ಪತ್ರೆಯ ಬೆಡ್ಶೀಟ್ಗಳನ್ನಿಡುವ ಗೋಡೌನ್ವೊಂದರಲ್ಲಿ ಮಲಗಲು ವ್ಯವಸ್ಥೆ ಇರುವುದಾಗಿ ತಿಳಿಸಿ ಆ ಕೊಠಡಿಗೆ ಆತನನ್ನು ಕಳುಹಿಸಿಕೊಟ್ಟಿದ್ದ. ಸ್ವಲ್ಪ ಸಮಯದ ನಂತರ ಆರೋಪಿ ಕೂಡಾ ಗೋಡೌನ್ಗೆ ತೆರಳಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ನೊಂದ ಬಾಲಕ ಇತರರಲ್ಲಿ ವಿಷಯವನ್ನು ತಿಳಿಸಿದ್ದು, ಇದರಿಂದ ಪ್ರಕರಣ ಬೆಳಕಿಗೆ ಬಂದಿತು. ಆರೋಪಿ ಸೆಕ್ಯೂರಿಟಿ ಗಾರ್ಡ್ ಮಂಗಳವಾರ ಸಂಜೆಯವರೆಗೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಸೆಕ್ಯೂರಿಟಿ ಗಾರ್ಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here