Thursday 3rd, July 2025
canara news

ಹಜ್ ಯಾತ್ರೆ: ಜು. 24ರಂದು ಮೊದಲ ತಂಡ ನಿರ್ಗಮನ

Published On : 20 Jul 2017   |  Reported By : Canaranews Network


ಮಂಗಳೂರು: ಕರ್ನಾಟಕದಿಂದ ಹಜ್ ಯಾತ್ರೆಗೆ ತೆರಳುವವರ ಮೊದಲ ತಂಡವು ಮಂಗಳೂರು ವಿಮಾನ ನಿಲ್ದಾಣದಿಂದ ಜು. 24ರಂದು ನಿರ್ಗಮಿಸಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ತಿಳಿಸಿದರು.ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 24ರಿಂದ 26ರ ತನಕ ಪ್ರವಾಸ ಇರುತ್ತದೆ. 24ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಯಾತ್ರೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಸಂಜೆ 4.15ಕ್ಕೆ ಮೊದಲ ವಿಮಾನ ನಿರ್ಗಮಿಸಲಿದೆ. ಅದಕ್ಕೂ ಮುನ್ನ ಪೂರ್ವಾಹ್ನ 11 ಗಂಟೆಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಜರಗಲಿದೆ ಎಂದರು.ಜು. 25 ಮತ್ತು 26ರಂದು ಮಧ್ಯಾಹ್ನ 12.55 ಹಾಗೂ ಸಂಜೆ 4.15ಕ್ಕೆ ವಿಮಾನ ಹೊರಡಲಿದೆ.

ಯಾತ್ರಿಕರು ತಮ್ಮ ಪ್ರಯಾಣದ ಎರಡು ದಿನ ಮುಂಚಿತವಾಗಿ ಮಂಗಳೂರು ಹಳೆ ವಿಮಾನ ನಿಲ್ದಾಣಕ್ಕೆ ತಮ್ಮ ಲಗೇಜ್,ಕನ್ಫರ್ಮೇಶನ್ ಕಾರ್ಡ್ ಹಾಗೂ ಹಣ ಪಾವತಿ ರಶೀದಿಗಳ ಸಮೇತ ಬಂದು ನೋಂದಾಯಿಸಿಕೊಳ್ಳಬೇಕು ಎಂದವರು ತಿಳಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here