Saturday 10th, May 2025
canara news

ರಾಗಿಂಗ್ ಕಾಯ್ದೆ ಬಗ್ಗೆ ಕಾನೂನು ಅರಿವು – ರಾಗಿಂಗ್ ಶಿಕ್ಷಾರ್ಹ ಅಪರಾಧ ನ್ಯಾಯಧೀಶ ಡಿ.ಪಿ ಕುಮಾರಸ್ವಾಮಿ

Published On : 22 Jul 2017   |  Reported By : Bernard D'Costa


ಕುಂದಾಪುರ್, ಜು.22: ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ. ಕುಂದಾಪುರ ಬಾರ್ ಅಸೋಸಿಯೇಷನ್ (ರಿ) ಅಭಿಯೋಗ ಇಲಾಖೆ, ಕುಂದಾಪುರ ಮತ್ತು ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ರಾಗಿಂಗ್ ತಡೆ ಕಾಯ್ದೆ ಬಗ್ಗೆ ಕಾನೂನು ಮಾಹಿತಿ ಶಿಬಿರವು ದಿನಾಂಕ 21 ರಂದು ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ನೆಡೆಯಿತು.

 

ಈ ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ತಾಲೂಕು ಸೇವಾ ಸಮಿತಿಯ ಅಧ್ಯಕ್ಷರಾದ ಗೌರಾನ್ವಿತ ಡಿ.ಪಿ. ಕುಮಾರ ಸ್ವಾಮಿ ಇವರು ಉದ್ಘಾಟಿಸಿ ‘ರ್ಯಾಗಿಂಗ್ ಎಂಬುದು ಕಾಲೇಜು ವಿಧ್ಯಾರ್ಥಿಗಳಲ್ಲಿರುವ ಒಂದು ಪಿಡುಗು, ರ್ಯಾಗಿಂಗ್ ಮಾಡುವುದರಿಂದ ಅಮಾಯಕ ವಿಧ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ, ರ್ಯಾಂಗಿಗ್ ಮಾಡುವುದು ಒಂದು ಶಿಕ್ಷಾರ್ಹವಾದ ಅಪರಾಧವಾಗಿದೆ, ಆದರಿಂದ ವಿಧ್ಯಾರ್ಥಿಗಳು ರ್ಯಾಂಗಿಗ್ ಮಾಡುವ ತಪ್ಪನ್ನು ಎಸಗ ಬಾರದು. ಹಾಗಾಗಿ ರ್ಯಾಂಗಿಗ್ ತಡೆ ಕಾಯ್ದೆಯನ್ನು ಜ್ಯಾರಿಗೆ ತರಲಾಗಿದೆ ಆದರಿಂದ ರ್ಯಾಂಗಿಗ್ ಮಾಡಿ ಶಿಕ್ಷೆಗೆ ಗುರಿಯಾಗಬಾರದು’ ಎಂದು ವಿಧ್ಯಾರ್ಥಿಗಳಿಗೆ ಅವರು ಸಂದೇಶ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಬಾರ್ ಅಸೋಸಿಯೆಷನ್ ಅಧ್ಯಕ್ಷ ವಕೀಲ ಬನ್ನಾಡಿ ಸೋಮನಾಥ್ ಹೆಗ್ಡೆ ವಹಿಸಿ ರ್ಯಾಂಗಿಗ್ ಪಿಡುಗಿನ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯೆಕ್ತಿಯಾಗಿ ಹಿರಿಯ ವಕೀಲರಾದ ಶಿರಿಯಾರ ಗೋಪಾಲ ಕ್ರಷ್ಣ ಶೆಟ್ಟಿ ಆಗಮಿಸಿ ವಿಧ್ಯಾರ್ಥಿಗಳಿಗೆ ರ್ಯಾಗಿಂಗ್ ತಡೆ ಕಾಯ್ದೆ ಬಗ್ಗೆ ಕಾನೂನು ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸಿದರು. ಅತಿಥಿಗಳಾಗಿ ಕುಂದಾಪುರ ಬಾರ್ ಅಸೋಸಿಯೆಷನ್ ಕಾರ್ಯದರ್ಶಿ ವಕೀಲ ಎಚ್.ರವಿಶ್ಚಂದ್ರ ಶೆಟ್ಟಿ, ಕುಂದಾಪುರ ಸಹಾಯಕ ಸರಕಾರಿ ಅಭಿಯೋಜಕರಾದಾ ಸುಮಂಗಲಾ ನಾಯ್ಕ್, ಕುಂದಾಪುರ ಪೆÇಲೀಸ್ ಉಪಾಧೀಕ್ಷಕ ಪ್ರವೀಣ್ ನಾಯ್ಕ್ ಇವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ ಸ್ವಾಗತ ಭಷಣ ಮಾಡಿದರು. ಕಾರ್ಯಕ್ರಮವನ್ನು ಪ್ರಾಧ್ಯಪಕಿ ಜಯಶೀಲ ಪೈ ನೆಡೆಸಿ ಕೊಟ್ಟರು. ಪ್ರಾಧ್ಯಪಕಿ ಸುಮತಿ ಶೆಣೈ ಧನ್ಯವಾದಗಳನ್ನು ಅರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here