Sunday 3rd, August 2025
canara news

ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ :ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

Published On : 22 Jul 2017   |  Reported By : Media release


2016-17ನೇ ಸಾಲಿನ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ರಾಜ್ಯ ಮಟ್ಟದ rank ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ಜರುಗಿತು. ಉಡುಪಿ, ಆದಿ ಉಡುಪಿ ಮತ್ತು ಕುಕ್ಕಿಕಟ್ಟೆ ಕೇಂದ್ರಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪಾಲ್ಗೊಂಡಿದ್ದರು. ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಅಫ್ಸಾ ಬೇಗಂ, ಕಟಪಾಡಿ, ಸಮ್ರೀನ್ ಬೆಳಪು, ಹಾಗೂ ಫರ್ಝಾನಾ ಕುಕ್ಕಿಕಟ್ಟೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಯುನಿವರ್ಸಿಟಿಯ ಎಸೋಸಿಯೇಟ್ ಪ್ರೊಫೆಸರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಾ| ಸಲಿನಾ ಉಮರ್ ವೆಲ್ಲದಾತ್ ಭಾಗವಹಿಸಿದ್ದರು ಹಾಗೂ ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಇದರ ಕರ್ನಾಟಕ ರಾಜ್ಯಾಧ್ಯಕ್ಷೆ ಸಿಸ್ಟರ್ ನವಿದಾ ಹುಸೈನ್ ಅಸಾದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‍ನ ಮಹಿಳಾ ವಿಭಾಗದ ರಾಜ್ಯ ಹೊಣೆಗಾರರಾದ ಕುಲ್ಸೂಮ್ ಅಬೂಬಕರ್, ಸ್ಥಾನೀಯ ಹೊಣೆಗಾರರಾದ ಶಾಹಿದಾ ರಿಯಾಝ್ ಉಪಸ್ಥಿತರಿದ್ದರು. ಮಾಸ್ಟರ್ ಅದೀಬ್ ಕುರ್‍ಆನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ನೂರ್‍ಜಹಾನ್ ಕಟಪಾಡಿ ಪ್ರಸ್ತಾಪನೆಗೈದರು. ಸಿಮ್ರಾನ್ ಆದಿಉಡುಪಿ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here