ಮಂಗಳೂರು: ಸತತ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದ್ದ ದ.ಕ.ಜಿಲ್ಲೆಯಲ್ಲಿ ಬರೋಬ್ಬರಿ 55 ದಿನಗಳ ನಂತರ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದೆ.
ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಸಿಆರ್'ಪಿಸಿ ಸೆಕ್ಷನ್ 144ರ ಅನ್ವಯ ಹಾಕಿದ್ದ ನಿಷೇಧಾಜ್ಞೆಯನ್ನು ವಾಪಸ್ ಪಡೆದಿರುವುದಾಗಿ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.ಆದರೆ ಅತೀ ಹೆಚ್ಚಿನ ಗಲಭೆ ನಡೆದಿದ್ದ ಬಂಟ್ವಾಳದಲ್ಲಿ ಮಾತ್ರ ನಿಷೇಧಾಜ್ಞೆ ಮುಂದುವರಿದಿದೆ. ಬಂಟ್ವಾಳದಲ್ಲಿ ಜುಲೈ 25ರವರೆಗೆ ನಿಷೇಧಾಜ್ಞೆ ಹೇರಲಾಗಿದೆ.