Saturday 10th, May 2025
canara news

ಸಾಂಗತಿ ಕ್ರಿಯೇಶನ್ಸ್ ಮುಂಬಯಿ ಪ್ರಸ್ತುತಿಯ `ಆಣ್‍ಮಗೆ' ವಿಭಿನ್ನ ಸಿನೇಮಾಕ್ಕೆ ಮುಹೂರ್ತ

Published On : 23 Jul 2017   |  Reported By : Rons Bantwal


ಸಿನೇಮಾ ಮಾಡುವುದು ದೇವರ ಕೆಲಸ : ದೇವದಾಸ್ ಕಾಪಿಕಾಡ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.22: ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು ರಚಿಸಿ ನಿರ್ದೇಶಿಸುತ್ತಿರುವ ಮುಂಬಯಿ ಅಲ್ಲಿನ ಯುವಮಿತ್ರ ಬಳಗದ ಸಾಂಗತಿ ಕ್ರಿಯೇಶನ್ಸ್ ಪ್ರಸ್ತುತಿಯ `ಆಣ್‍ಮಗೆ' ತುಳು ಚಲನಚಿತ್ರಕ್ಕೆ ಇಂದಿಲ್ಲಿ ಮುಹೂರ್ತ ನೆರವೇರಿಸಲ್ಪಟ್ಟಿದ್ದು ಕನ್ನಡಿಗರ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನೀದಿದರು. ಹಿರಿಯ ನಾಟಕ ಮತ್ತು ಚಲನಚಿತ್ರ ಕಲಾವಿದ ತೆಲಿಕೆದ ಬೊಳ್ಳಿ ಲ| ದೇವದಾಸ್ ಕಾಪಿಕಾಡ್ ಕ್ಲಾಪ್ಪಿಂಗ್‍ಗೈದು ಮುಹೂರ್ತ ನೆರವೇರಿಸಿದರು.

ಇಂದಿಲ್ಲಿ ಶನಿವಾರ ಮಂಗಳೂರುನ ದೀಪಾ ಕಂಪರ್ಡ್ಸ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಮುಹೂರ್ತ ಕಾರ್ಯಕ್ರಮದಲ್ಲಿ ಗೌರವ ಅತಿಥಿüಗಳಾಗಿ ವಿಶ್ವ ಕೊಂಕಣಿ ಮಂಡಳ್ ಮಂಗಳೂರು ಅಧ್ಯಕ್ಷ ಬಸ್ತಿ ವಾಮನ್ ಶೆಣೈ, ಮಾಂಡ್ ಸೊಭಾಣ್ ಮಂಗಳೂರು ಸ್ಥಾಪಕಾಧ್ಯಕ್ಷ ಎರಿಕ್ ಓಝೇರಿಯೊ, ಹಿರಿಯ ರಂಗ ಕಲಾವಿದ ಲ| ಕಿಶೋರ್ ಡಿ.ಶೆಟ್ಟಿ, ಹಿರಿಯ ನಾಟಕ ಮತ್ತು ಚಲನಚಿತ್ರ ಕಲಾವಿದರುಗಳಾದ ವಿಜಯಕುಮಾರ್ ಕೋಡಿಯಾಲ್‍ಬೈಲ್, ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಇದರ ಮಾಜಿ ಅಧ್ಯಕ್ಷ ಪಿ.ಎನ್ ಶ್ಯಾನ್‍ಭಾಗ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪೂರ್ವಾಧ್ಯಕ್ಷ ರೋಯ್ ಕಾಸ್ತೆಲಿನೋ, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ದಾಯ್ಜಿವರ್ಲ್ಡ್ ಸಮೂಹದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಮತ್ತು ಸಾಂಗತಿ ಬಳಗದ ವಾಲ್ಟರ್ ಡಿ'ಸೋಜಾ ಕಲ್ಮಾಡಿ, ಲಿಯೋ ಫೆರ್ನಾಂಡಿಸ್ ಜೆರಿಮೆರಿ, ಸಿರೀಲ್ ಕಾಸ್ತೆಲಿನೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತುಳುನಾಡ ಜನರು ತ್ರಿಭಾಷಾ ಪರಿಣತರು. ಆದುದರಿಂದ ತುಳುಭಾಷೆಯ ನೆಪದಲ್ಲಿ ಸಾಮರಸ್ಯ ಸಾರುವ ಅಪೂರ್ವವಾದ ಸಮ್ಮೀಳನ ಇದಾಗಿದೆ. ಕೊಂಕಣಿ, ಕ್ರೈಸ್ತÀರಲ್ಲಿ ತುಳು ಭಾಷಾ ಪ್ರೇಮ ಪ್ರಶಂಸನೀಯ. ಸಿನೇಮಾ ಮಾಡುವುದು ದೇವರ ಕೆಲಸ. ತುಳು ನಾಟಕ ಪ್ರದರ್ಶನದಲ್ಲೂ ನಾಲ್ಕರಲ್ಲಿ ಮೂರು ಪಾಲು ಚರ್ಚ್‍ಗಳ ಅದರಲ್ಲೂ ಪಾದ್ರಿಗಳ ಪಾತ್ರ ಹಿರಿದು. ಅವರೆಲ್ಲರಲ್ಲೂ ತುಳುವಿನ ಜೀವಾಳವಿದೆ. ನಾವು ನ್ಯಾಯೋಚಿತ ಮಿತದರದಲ್ಲಿ ಶ್ರೇಷ್ಠ ಚಿತ್ರ ನೀಡಿದ ಅಭಿಮಾನ ನಮಗಿದೆ. ಅಂತೆಯೇ ಈ ಚಿತ್ರವೂ ಶೀಘ್ರವೇ ತೆರೆ ಕಂಡು ತುಳುವಿನ ಶ್ರೇಷ್ಠತೆಗೆ ವರವಾಗಲಿ ಎಂದು ದೇವದಾಸ್ ಕಾಪಿಕಾಡ್ ಶುಭಾರೈಸಿದರು.

ಇದೊಂದು ತುಳುನಾಡ ಚರಿತ್ರೆಯ ಒಳ್ಳೆಯ ಹೆಸರು ತಂದೊದಗಿಸುವ ಚಲನ ಚಿತ್ರವಾಗಲಿ. ಈ ವೇದಿಕೆ ಮತ್ತು ಕಾರ್ಯಕ್ರಮದಲ್ಲಿ ಒಗ್ಗೂಡಿದ ತುಳು ಚಿತ್ರ ರಂಗದ ದಿಗ್ಗಜರ ಕೂಡುವಿಕೆಯೇ ಯಶಸ್ಸಿನ ಸಾಕ್ಷಿಯಾಗಲಿದೆ. ಚಿತ್ರಕ್ಕೂ ಸೂಕ್ತ ಸಮಯದಲ್ಲಿ ಮುಹೂರ್ತ ನೆರವೇರಿದೆ. ಬರೇ ತುಳುವರು ಮತ್ರವಲ್ಲ ಅನ್ಯ ಭಾಷಿಗರ ನೋಡುಗರ ಸಂಖ್ಯೆ ಈ ಚಿತ್ರಕ್ಕೆ ಲಭಿಸಲಿ. ಅದಕ್ಕಾಗಿ ಚಿತ್ರದಲ್ಲಿ ಅವಿರತ ವೈಶಿಷ್ಟ ್ಯತಾ ಸಾಧನೆ ಆಗಬೇಕು ಎಂದು ಪಾಲೆತ್ತಾಡಿ ಸಲಹಿದರು.

ಕಿಶೋರ್ ಶೆಟ್ಟಿ ಮಾತನಾಡಿ ಅನ್ಯಭಾಷಿಗಳಿಂದ ತುಳು ಸಿನೇಮಾ ನಿರ್ಮಾಣ ಅಭಿನಂದನೀಯ ಎಂದರು.

ಕ್ರೈಸ್ತರು ಮತ್ತು ಕೊಂಕಣಿಗರು ಬಹುಭಾಷಿಗರು. ಇಂತವರಲ್ಲಿ ಹೊರನಾಡ ಮುಂಬಯಿಯಲ್ಲಿನ ತ್ರಿಮೂರ್ತಿಗಳು ನಿರ್ಮಿಸುವ ತುಳುಚಿತ್ರದ ಈ ಯೋಜನೆ ಸೌಹಾರ್ದತೆಗೆ ಪಾತ್ರವಾಗಲಿ ಎಂದು ರೋಯ್ ಕ್ಯಾಸ್ತೆಲಿನೊ ಆಶಯ ವ್ಯಕ್ತ ಪಡಿಸಿದರು.

ಬಸ್ತಿ ಶೆಣೈ ಮಾತನಾಡಿ ಸಾಹಸಮಯ ತುಳುಚಿತ್ರದ ಯಶಸ್ಸಿಗೆ ಶ್ರೀ ವೆಂಕಟ್ರಾಮಣ ದೇವರು ಅನುಗ್ರಹಿಸಲಿ ಎಂದರು.

ಕೊಡಿಯಲ ಬೈಲ್ ಮಾತನಾಡಿ ಈ ನೂತನ ಚಿತ್ರ ತುಳು ಚಿತ್ರರಂಗದ ಕೀರಿಟಕ್ಕೆ ಗರಿಯಾಗಲಿ. ಈ ಚಿತ್ರ ಯಶ ಕಾಣಲಿ ಎಂದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಚಿತ್ರಕ್ಕೆ ಹೆಸರು ಸೂಚಿಸಿದ ಕಲಾಕಾರ ಉಮೇಶ್ ಮಿಜಾರು, ಮಂಗಳೂರು ಆಕಾಶವಾಣಿಯ ಡಾ| ಸದಾನಂದ ಪೆರ್ಲಾ, ಪ್ರೇಮ್ ಡಿ'ಸೋಜಾ ಅವರಿಗೆ ಪುಷ್ಪಗುಪ್ಛದೊಂದಿಗೆ ಗೌರವಿಸಲಾಯಿತು. ಸಿರೀಲ್ ಕಾಸ್ತೆಲಿನೋ ಸುಖಾಗಮನ ಬಯಸಿದರು. ಮನು ಬಂಟ್ವಾಳ್ ಕಾರ್ಯಕ್ರಮ ನಿರ್ವಾಹಿಸಿ ಅಭಾರ ವ್ಯಕ್ತಪಡಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here