ಮಂಗಳೂರು: ಮೂರು ವರ್ಷದ ಹಿಂದೆ ನಡೆದಿದ್ದ ಹಲ್ಲೆ ಘಟನೆಯೊಂದರ ಆರೋಪಿಯನ್ನು ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ. ನವಾಝ್ ಬಂಧಿತ ಆರೋಪಿಯಾಗಿದ್ದು, ಇತನ ಮೇಲೆ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಲಾಗಿತ್ತು. 2014 ಸೆ.೧೪ ರಂದು ಕೋಡಿಂಬಾಡಿ ಮಸೀದಿಯಲ್ಲಿ ಲೆಕ್ಕ ಪರಿಶೋಧನೆಯನ್ನು ಮಾಡುತ್ತಿದ್ದ ಜಿ.ಎಸ್.ಹನೀಫ್ (42) ಎಂಬುವರ 8 ಜನರೊಂದಿಗೆ ಸೇರಿ ನವಾಝ್ ಹಲ್ಲೆ ನಡೆಸಿದ್ದ.
ಈ ಸಂಬಂಧ ನವಾಝ್ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದರೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನವಾಝ್ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ, ಆಗ ಪುತ್ತೂರು ನಗರ ಠಾಣೆಯಲ್ಲಿ ಆತನ ಮೇಲೆ ಲುಕ್ ಔಟ್ ಸರ್ಕ್ಯುಲರ್ (LOC) ಅನ್ನು ತೆರೆಯಲಾಗಿತ್ತು. ನವಾಝ್ ಮೂರು ವರ್ಷದ ನಂತರ ವಿದೇಶದಿಂದ ಮನೆಗೆ ಬರುವ ವಿಷಯ ತಿಳಿದ ಪೊಲೀಸರು, ನವಾಝ್ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಿದ್ದಾರೆ.